ಜೀವನ ಕಲಿಸಿದ ವ್ಯವಹಾರದ ಪಾಠಗಳು

ದಸರಾ...ದೇಶಕ್ಕೆ... ಅದರಲ್ಲೂ ಕನ್ನಡ ನಾಡಿಗೆ ವಿಶೇಷ ಹಬ್ಬ.. ನಾಡ ಹಬ್ಬ ಸಹ. ಇದರ ಒಂದು ವಿಶೇಷ ಭಾಗ ಆಯುಧ ಪೂಜೆ... ನಾವು ಚಿಕ್ಕ ಕಾರ್ಖಾನೆಯನ್ನು ನಡೆಸುತ್ತಿದ್ದಷ್ಟು ದಿನವೂ ಆಯುಧ ಪೂಜೆಯನ್ನು ಆಚರಿಸಿದ್ದಿದೆ.... ಶುರುವಿನ ದಿನಗಳಲ್ಲಿ, ಹಣಕ್ಕಾಗಿ ಕಷ್ಟವಿದ್ದಾಗ ಪೂಜೆಯನ್ನು ಬಿಡದೆ ಕ್ಲುಪ್ತವಾಗಿ ಮಾಡಿ ಮುಗಿಸುತ್ತಿದ್ದೆವು. ಹಣಕ್ಕೆ ಪರದಾಡದೆ ಆಯುಧ ಪೂಜೆಯನ್ನು ಮಾಡುವ ಹಂತ ತಲುಪಲು ಸವೆಸಿದ ದಾರಿ ಬಹುದೀರ್ಘ, ಕಠಿಣ ಹಾಗೂ ಸವಾಲಿಂದ ಕೂಡಿತ್ತು. ಆ ಕಲಿಕೆ ಸುದೀರ್ಘವೂ ಮತ್ತು ದುಬಾರಿ ಖರ್ಚಿನದೂ ಆಗಿತ್ತು. ಈ ಹಂತದಲ್ಲಿ ಆಯುಧ ಪೂಜೆ ನಿಜಕ್ಕೂ ಒಂದು ಸಂಭ್ರಮ.... ಎಲ್ಲ ಕೆಲಸಗಾರರಿಗೂ ಬಟ್ಟೆ, ಬೋನಸ್, (ಹಣ್ಣುಗಳು, ಸಿಹಿ ಹಾಗೂ ಹಣದ ಕವರನ್ನು ನಮ್ಮ ಕೆಲಸದವರಿಗೆ ಕೊಡುತ್ತಿದ್ದದ್ದು ನಮ್ಮಪ್ಪ- ಅವರಿರುವವರೆಗೂ) ಹಾಗೂ ಪೂಜೆಯ ದಿನ ಬಂದ ಇಷ್ಟರು ಹಾಗೂ ಸ್ನೇಹಿತರು ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡುವುದು. ಇದೊಂದು ಸಂಪ್ರದಾಯದಂತೆ ಸುಮಾರು 30 ವರ್ಷಗಳ ಕಾಲ ಸತತವಾಗಿ ನಡೆಯಿತು. 70ರ ದಶಕದಲ್ಲಿ ಸಣ್ಣ ಕೈಗಾರಿಕೆಗಳ ಪ್ರಾರಂಭಕ್ಕೆ ಸರ್ಕಾರ, ಬ್ಯಾಂಕುಗಳಿಂದ ತುಂಬಾ ಪ್ರೋತ್ಸಾಹವಿತ್ತು. ಸಾಲಗಳನ್ನು ಸುಲಭವಾಗಿ ಕೊಡುತ್ತಾರೆ ಎನ್ನುವ ಒಂದು ಕಾರಣವೇ ಸಾಕಾಗಿತ್ತು... ನನ್ನ ಮನಸ್ಸಿಗೆ ಸಣ್ಣ ಕೈಗಾರಿಕೆ ಶುರು ಮಾಡಲು ಸಿಕ್ಕಿದ ಪ್ರೋತ್ಸಾಹ. ಆಗ ನನ್ನಲ್ಲಿ ಇದ್ದದ್ದು ಏನು ಬೇಕಾದರೂ ಸಾಧಿಸಬಲ್ಲೆ ಎಂಬ ಹುಮ್ಮಸ್ಸು... ಇದಕ್ಕೆ ಒಂದು ...