ಭಗವದ್ಗೀತೆ - ಗೀತೋತ್ಸವ
ಭಗವದ್ಗೀತೆಯ ಪ್ರಭಾವ ವಿಶ್ವದೆಲ್ಲೆಡೆ ಪಸರಿಸುತ್ತಿದೆ. ಗೀತಾ ಅಭಿಯಾನಗಳು ನಿರಂತರವಾಗಿ ಎಲ್ಲೆಲ್ಲೂ ನಡೆಯುತ್ತಿವೆ. ಭಗವದ್ಗೀತಾ ಅಭಿಯಾನ- 2025 ಇನ್ನೇನು ಸಂಪನ್ನಗೊಳ್ಳಲಿದೆ. ಉಡುಪಿಯಲ್ಲಿ ನಡೆದ ಒಂದು ಲಕ್ಷ ಜನರ ಭಗವದ್ಗೀತಾ ಸಾಮೂಹಿಕ ಕಂಠಪಾಠ, ವಿಶಿಷ್ಟವಾಗಿತ್ತು. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವತಃ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು . ಈ ವರ್ಷದ ಭಗವದ್ಗೀತಾ ಅಭಿಯಾನದಲ್ಲಿ.. ವಿಶೇಷವಾಗಿ ಶಾಲಾ ಮಕ್ಕಳಿಗೆ ಭಗವದ್ಗೀತೆಯನ್ನು ಪರಿಚಯಿಸಿ, ಅದರ ಬಗ್ಗೆ ಆಸ್ತೆ ಮೂಡಿಸಲು ಒತ್ತುಕೊಡಲಾಗಿತ್ತು. ಇದರ ಅಂಗವಾಗಿ, ನಾನು ಒಡನಾಟ ಇಟ್ಟುಕೊಂಡಿರುವ "ಸ್ನೇಹ ಸೇವಾ ಟ್ರಸ್ಟ್" ಈ ವರ್ಷ ಪ್ರೌಢಶಾಲೆಯ ಮಕ್ಕಳಿಗೆ ಭಗವದ್ಗೀತೆ ಸ್ಪರ್ಧೆ “ ಗೀತೋತ್ಸವ” ಹೆಸರಿನಲ್ಲಿ ನಡೆಸಿ 19.12.2025 ರಂದು ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಾಸವಿ ಕನ್ವೆನ್ಷನ್ ಹಾಲಿನಲ್ಲಿ , ಮಧ್ಯಾಹ್ನ ಸುಮಾರು 3 ಘಂಟೆಗೆ ಸೇರಿದ ಕಾರ್ಯಕರ್ತರು, ಸಮರೋಪಾದಿಯಲ್ಲಿ ಮಾಡಿದ, ಪ್ರಾಂಗಣದ ಅಲಂಕಾರ, ಮುಖ್ಯ ವೇದಿಕೆ, ಬಹುಮಾನ ವಿತರಣೆಗಾಗಿ ಮತ್ತೆ ಮೂರು ವೇದಿಕೆಗಳು, ಅತಿಥಿಗಳಿಗೆ ಗೌರವ ಸಮರ್ಪಣೆಗೆ ಬೇಕಾದ ಸಲಕರಣೆಗಳು ಹಾಗೂ ಬಹುಮಾನಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವ ಕೆಲಸಗಳು, ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಿದ ಸಂಭ್ರಮವನ್ನು ನೋಡುತ್ತಾ ನಾನೂ ಸಂಭ್ರಮಿಸಿದ್ದ...