Posts

Showing posts from August, 2025

ಗೌರಿ ಹಬ್ಬ- ಬಾಂಧವ್ಯ ಬೆಸುಗೆ

Image
ಆಗಸ್ಟ್ 15 ಸ್ವಾತಂತ್ರ್ಯೋತ್ಸವದ ದಿನ, ಭಾರತದಲ್ಲೆಲ್ಲಾ ಅದರದೇ ಸಂಭ್ರಮ. ಈ ಸಂಭ್ರಮದ ಜೊತೆಗೆ ನಾನು ಪಾಲ್ಗೊಂಡದ್ದು ಇನ್ನೊಂದು ಸಂಭ್ರಮ. ಅದು “ ಹೂವಿನ ಕಟ್ಟೆ ಹೆಣ್ಣು ಮಕ್ಕಳ ಸಂಭ್ರಮ”  ಎನ್ನುವ ಹೆಸರಿನಲ್ಲಿ ಸಂಭ್ರಮಿಸಿದ್ದು. ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ ಎಂದು ನಿಮಗೆ ಅನಿಸಿದ್ದರೆ ತಪ್ಪೇನಿಲ್ಲ... ಕಾರಣ ಆ ಹೆಣ್ಣು ಮಕ್ಕಳ ಸಂಭ್ರಮದಲ್ಲಿ ಸಂಬಂಧಪಟ್ಟ ಗಂಡಸರಿಗೂ ಭಾಗವಹಿಸಲು ಆಹ್ವಾನವಿತ್ತು. ನಾನು ಹೂವಿನ ಕಟ್ಟೆ ಮನೆತನಕ್ಕೆ ದೊಡ್ಡ ಅಳಿಯ ಆದ ಕಾರಣದಿಂದ ನಾನೂ ಅರ್ಹನೇ.  ಈ ಕಾರ್ಯಕ್ರಮ ಸುಮಾರು 18 ವರ್ಷಗಳಿಂದ ನಡೆಯುತ್ತಿದ್ದರೂ, ನನ್ನ ಸ್ಪಷ್ಟ ನೆನಪಿನಂತೆ  ನಾನು ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿದ್ದು ಇದೇ ಮೊದಲು.  ಈ ಕಾರ್ಯಕ್ರಮಕ್ಕೆ ಮೂಲ ಸ್ರೋತವೇ ಎಚ್ ಪಿ ರಂಗನಾಥ್ ಮತ್ತು ಜಿ ವಿಜಯ ದಂಪತಿ.( #ಬಲು ಅಪರೂಪ ನಂಜೋಡಿ ) ಈ ಕಾರ್ಯಕ್ರಮ ಅವರು 25 ವರ್ಷದಿಂದ ವಾಸವಾಗಿದ್ದ ಮನೆಯಲ್ಲಿ ಸದ್ಯದ ಮಟ್ಟಿಗೆ ಕೊನೆಯ ಕಾರ್ಯಕ್ರಮ... ಅವರು ಬೇರೊಂದು ಹೊಸ ಮನೆಗೆ ವಾಸ್ತವ್ಯವನ್ನು ಬದಲಾಯಿಸುತ್ತಿದ್ದಾರೆ. ಇದೂ  ನಾನು ಭಾಗವಹಿಸಲು ಮುಖ್ಯ ಕಾರಣವಾಗಿತ್ತು.  ಗೌರಿ ಹಬ್ಬಕ್ಕೆ ಹೆಣ್ಣು ಮಕ್ಕಳಿಗೆ ಅರಿಶಿನ ಕುಂಕುಮ ಕೊಡುವ ಸಂಪ್ರದಾಯವನ್ನು, ಭಿನ್ನವಾಗಿ ಆಚರಿಸಲು ಸಂಬಂಧಪಟ್ಟ ಎಲ್ಲ ಹೆಣ್ಣು ಮಕ್ಕಳನ್ನು (ಬಹುಶಃ ಅಕ್ಕತಂಗಿಯರಿಂದ ಪ್ರಾರಂಭವಾದ  ಈ ಚಿಂತನೆ ಕ್ರಮೇಣ ವಿಸ್ತಾರಗೊಂಡು, ಅವರಿಬ್ಬರ ...

ಅರ್ಹತೆಯ ಸವಾಲು ಎದುರಾದಾಗ..

Image
ಆಪ್ತ ಸಮಾಲೋಚಕನಾಗಿ, ಮೂರು ದಶಕಕ್ಕೂ ಮಿಕ್ಕಿದ ನನ್ನ ಪಯಣದಲ್ಲಿ, ವಿವಿಧ ರೀತಿಯ ಚಿಂತನೆಗಳು, ಸಮಸ್ಯೆಗಳು, ಅದನ್ನು ಪರಿಹರಿಸಿಕೊಳ್ಳಬೇಕಾದಂತಹ ಮನಸ್ಸು, ಅದಕ್ಕೆ ಮಾಡುವ ಪ್ರಯತ್ನ ಹೀಗೆ ವಿವಿಧ ರೀತಿಯ ವ್ಯಕ್ತಿಗಳ ಜೊತೆ ಸಂವಹನ ಮಾಡ ಬೇಕಾದದ್ದು ಅನಿವಾರ್ಯ ಹಾಗೂ ಅವಕಾಶ ಸಹ. ಅದೇ ಒಂದು ಪ್ರಪಂಚ.  ವ್ಯಕ್ತಿಯ ಹಿನ್ನೆಲೆ ಏನೇ ಇರಲಿ, ಆಪ್ತ ಸಮಾಲೋಚಕನಾಗಿ ನಮ್ಮ ಬಳಿ ಮನಸ್ಸು ಬಿಚ್ಚಿ ಮಾತಾಡಲು, ಅವರಿಗೆ ನಮ್ಮ ಮೇಲೆ ವಿಶ್ವಾಸ ಬರಬೇಕಾದದ್ದು ಬಹು ಮುಖ್ಯ. ಆಪ್ತ ಸಮಾಲೋಚಕನಾಗಿ, ಪರಿಣಾಮಕಾರಿ ಫಲಿತಾಂಶಗಳನ್ನು ಕೊಡಬೇಕಾದರೆ ಮೊದಲ ಹಂತ ಅವರ ವಿಶ್ವಾಸವನ್ನು ಗಳಿಸುವುದೇ ಆಗುತ್ತದೆ. ಅದೇ ಸವಾಲಾಗಿ ನನ್ನ ಮುಂದೆ ಧುತ್ತೆಂದು ನಿಂತ ಪ್ರಸಂಗ ನಿಮ್ಮ ಮುಂದೆ. ಅಂದು ನನ್ನ ಮುಂದೆ ಬಂದವರು ನನಗಿಂತಲೂ ಹಿರಿಯರಾದ ಒಬ್ಬ ವ್ಯಕ್ತಿ. ಅವರ ಮುಖದಲ್ಲಿ ಕೋಪ ಇತ್ತು, ಅಸಮಾಧಾನ ಇತ್ತು... ನಮಸ್ಕರಿಸಿ ಕೂಡಲು ಹೇಳಿದೆ... ಪ್ರತಿಯಾಗಿ ನಮಸ್ಕಾರವೂ ಮಾಡದೆ ಕೂರುತ್ತಾ  ಹೇಳಿದ್ದು.." ನಿಮಗೊಂದು ಪ್ರಶ್ನೆ ಕೇಳಬೇಕು... ಕೌನ್ಸೆಲಿಂಗ್ ಮಾಡಲು ನಿಮಗೇನು ಅರ್ಹತೆ ಇದೆ... ನೀವು ನನಗಿನ್ನ ಚಿಕ್ಕವರು."  ಒಂದು ಕ್ಷಣ ಅಧೀರನಾಗಿದ್ದು ಸತ್ಯ. ಸಮಜಾಯಿಷಿ ಕೊಡುವ ರೀತಿಯಲ್ಲಿ ಹೇಳಿದ್ದು.." ಹೌದು ಸರ್ ನಾನು ನಿಮಗಿನ್ನ ಚಿಕ್ಕವನು, ತಕ್ಕಮಟ್ಟಿಗಿನ ಅನುಭವ ಇದೆ, ನಿಮಗೆ ಒಪ್ಪಿಗೆ ಆದರೆ ನನ್ನ ಜೊತೆ ಮಾತನಾಡಿ... ನನ್ನ ಸೀಮಿತ ಅನುಭವದಲ್ಲಿ ಸಾಧ್ಯವಾದಷ್ಟೂ ನ...

ಶ್ರಧ್ದೆ- ಶ್ರಾಧ್ದ

Image
ಶ್ರಾವಣ ಮಾಸದಿಂದ ಪ್ರಾರಂಭವಾಗುವ ಹಬ್ಬದ ಸಾಲು .. ನವರಾತ್ರಿಯೊಂದಿಗೆ ಮುಕ್ತಾಯ. ಈ ಮಧ್ಯೆ ನಾಗರ ಪಂಚಮಿಯ ಮಾರನೆಯ ದಿನ ನಮ್ಮ ಮನೆಯಲ್ಲಿ ಒಂದು ವಿಶೇಷ ಹಬ್ಬ... ಅದುವೇ ನಮ್ಮ ಅಮ್ಮನನ್ನು ನೆನೆಸಿಕೊಳ್ಳುವ ಹಬ್ಬ. 39 ವರ್ಷಗಳ ಹಿಂದೆ ತೀರಿಕೊಂಡ ನಮ್ಮಮ್ಮನ ಈ ವರ್ಷದ ಶ್ರಾಧ್ದದ ದಿನ. ಶ್ರದ್ಧಯಾ ಕ್ರಿಯತೇ ಇತಿ ಶ್ರಾಧ್ದಃ... ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿದಾಗ ಅದು ಶ್ರಾಧ್ದವಾಗುತ್ತದೆ. ಆದರೆ ಆಡು ಭಾಷೆಯಲ್ಲಿ ಶ್ರಾಧ್ದ ಎಂದಾಗ  ಹೊಳೆಯುವುದೇ ತಿಥಿ ಎಂಬ ಇನ್ನೊಂದು ಪದ.. ಅದು ಪಿತೃಕಾರ್ಯ, ಪಿತೃಗಳನ್ನು ನೆನೆಯುವ,ಗೌರವಿಸುವ, ಋಣ ತೀರಿಸುವ ಒಂದು ವಿಧಾನ. ನನ್ನ ಚಿಕ್ಕಂದಿನ ನೆನಪನ್ನು ಕೆದಕಿದರೆ, ತಾತನ ತಿಥಿ ಕಣ್ಮುಂದೆ ಬರುತ್ತದೆ. ದೇವನಹಳ್ಳಿ ಇಂದ ಬರುತ್ತಿದ್ದ ರಾಮಾಶಾಸ್ತ್ರಿಗಳು, ಬೆಂಗಳೂರಿನಿಂದ ಬರುತ್ತಿದ್ದ ಚಿಕ್ಕಪ್ಪ ನಂಜಣ್ಣಯ್ಯ,  ಮಡಿ ಮಡಿ ವಾತಾವರಣ, ಹಾಗಾಗಿ ನಮಗೆ ಮನೆಯಲ್ಲಿ ಎಲ್ಲೆಂದರಲ್ಲಿ ಓಡಾಡಲು ಅನುಮತಿ ಇಲ್ಲ. ಶಾಲೆಯ ಊಟದ ಸಮಯದಲ್ಲಿ ಮನೆಗೆ ಬಂದಾಗ, ತಿಥಿಯ ಭಾಗವಾಗಿ ಊಟ ಮಾಡುತ್ತಿದ್ದ ಬ್ರಾಹ್ಮಣರು, ಭಕ್ಷ ಭೋಜ್ಯಗಳ ಘಮ. ಆದರೆ ನಮಗೆ ಊಟವಿಲ್ಲ. ನಮ್ಮ ಊಟ ಸುಮಾರು 3 ಘಂಟೆಗೆ.. ಆಗ ಶಾಲೆಯಿಂದ ಮನೆಗೆ ಊಟಕ್ಕೆ ಬರಲು ವಿಶೇಷ ಅನುಮತಿ.  ಅಂತಹ ಒಂದು ದಿನ, ಶಾಲೆಯ ಊಟದ ಸಮಯದಲ್ಲಿ ಮನೆಗೆ ಬಂದಾಗ, ನನ್ನಮ್ಮ ಊಟ ಮಾಡುತ್ತಾ ಇದ್ದದ್ದು ಕಂಡು ನನಗೆ ಅತೀವ ದುಃಖವಾಯಿತ...