ಸುಳ್ಳು - ಸತ್ಯ - ಆಣೆ

ಸುಳ್ಳು ಯಾಕೆ ಹೇಳಲೀ ನಾನು.... ಮೊನ್ನೆ ವಾಕಿಂಗ್ ನಲ್ಲಿ ಯಾರೋ ಒಬ್ಬರು ಹೇಳ್ತಿದ್ರು “ನನ್ನ ಜೀವಮಾನದಲ್ಲಿ ಒಂದು ಸುಳ್ಳು ಹೇಳಿಲ್ಲ" ಅಂತ.... ಅವರ ಮುಖ ನೋಡಿ ಸಣ್ಣ ನಗೆ ಬೀರಿದೆ... ಯಾಕ್ರೀ ನಗ್ತೀರಾ ಅಂತ ತಮಾಷೆಯಾಗಿ ಧಮ್ಕಿ ಹಾಕಿದರು. ಮನಸ್ಸಿಗೆ ಬಂತು ಅವರು ಹೇಳಿದ್ದು ಸರಿ ಅಂತ... ಯಾಕಂದ್ರೆ ಒಂದೋ ಅವರು ಹೇಳಿದ್ದು ಒಂದು ಸುಳ್ಳು ಹೇಳಿಲ್ಲ ಅಂತ... ನೂರಾರು ಹೇಳಿರಬಹುದಲ್ಲ... ಅಥವಾ ಅವರು ಹೇಳಿದ್ದು ಹಸಿ ಸುಳ್ಳು ಇರಬಹುದಲ್ಲ. ಚೆನ್ನಾಗಿ ಪರಿಚಯವಿಲ್ಲದಿದ್ದ ಕಾರಣ ಇದನ್ನು ಅವರಿಗೆ ಹೇಳುವ ಧೈರ್ಯ ಬರಲಿಲ್ಲ.. ಸುಮ್ನೆ ಮುಂದೆ ಹೆಜ್ಜೆ ಹಾಕ್ದೆ. ಗೊದ್ದ ಗೋಡೆ ಹಾಕಿದ್ ಕಂಡೆ ಇಲಿ ಬೆಕ್ಕಿನ್ ತಿನ್ನೋದ್ ಕಂಡೆ ಕಂಡೇನಕ್ಕ ಮುಂಗ್ ಸೀಯ ಕಡಾಯಿ ಗಾತ್ರವ... ಇದು ನಾನು ಚಿಕ್ಕಂದಿನಲ್ಲಿ ಕಲಿತ ದಾಸರ ಪದ. ಆಗ ಅದು ಅರ್ಥವೇ ಇಲ್ಲದ ತಮಾಷೆಯಾಗಿ ಮಾತ್ರ ಕಾಣುತ್ತಿತ್ತು. ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳು ನಮ್ಮಲ್ಲಿಲ್ಲ. ಸುಳ್ಳೇ ನಮ್ಮನೆ ದೇವರು . .......