ಭಿತ್ತಿಪತ್ರ-ಗೋಡೆ ಬರಹ

ಕೂಗುಮಾರಿ ಬಂದು ಬಾಗಿಲು ಬಡಿತಾಳೆ, ತಕ್ಷಣ ಬಾಗಿಲು ತೆಗೆದು ಅವಳನ್ನು ನೋಡಿದರೆ, ರಕ್ತಕಾರಿ ಸಾಯೋದು ಖಚಿತ. ಅದನ್ನ ತಪ್ಸೋಕೇ ಬಾಗಿಲ ಮೇಲೆ ಮೂರು ನಾಮ ಬರೆದು ನಾಳೆ ಬಾ ಎಂದು ಜೊತೆಗೆ ಸೇರಿಸಿದರೆ.. ಕೂಗು ಮಾರಿ ಅದನ್ನು ಓದಿ ನಾಳೆ ಬರೋಣ ಅಂತ ಹೋಗ್ತಾಳೆ, ನಾಳೆ ಮತ್ತದೇ, ಹಾಗಾಗಿ ಸಾಯೋದು ತಪ್ಪುತ್ತೆ. ಇದು ಚಿಕ್ಕಂದಿನಲ್ಲಿ ಕೇಳಿದ್ದ ಒಂದು ಸುದ್ದಿ . ಹಾಗಾಗಿ ಎಲ್ಲರ ಮನೆಯ ಬಾಗಿಲ ಮೇಲೆ ಇದು ಬರೆದದ್ದನ್ನು ನೋಡಿದ್ದೇನೆ... ನಮ್ಮ ಮನೆಯ ಬಾಗಿಲ ಮೇಲೂ ಬರೆದದ್ದನ್ನು ಈಗ ನೆನೆದು ನಕ್ಕಿದ್ದೇನೆ. ಇದು ನೆನಪಾಗಲು ಕಾರಣವೇನೋ ಗೊತ್ತಿಲ್ಲ.. ಹಾಗೇ ಮನಸ್ಸಿಗೆ ಬಂತು... ಅದರ ಹಿಂದೆಯೇ ನೆನಪಿನ ಸರಮಾಲೆ. ಬಹಳ ಜನಕ್ಕೆ ವಿಷಯವನ್ನು ತಿಳಿಸಬೇಕಾದಾಗ ಅದನ್ನು ಗೋಡೆಯ ಮೇಲಿನ ಬರಹ ಅಥವಾ ಗೋಡೆಗೆ ಅಂಟಿಸಿದ ಚೀಟಿಯ ಮೂಲಕ ಮಾಡುತ್ತಿದ್ದದ್ದು ರೂಢಿಗತ. ಅದಕ್ಕೂ ಮೊದಲು, ಓದು ಬರಹ ಬರದ ಜನ ಜಾಸ್ತಿ ಇದ್ದಾಗ, ಈ ವಿಚಾರಗಳನ್ನು ಡಂಗುರದ ಮೂಲಕ ಸಾರುತ್ತಿದ್ದರು. ಡಂಗುರವ ಸಾರಿರಯ್ಯ ಡಿಂಗರಿಗರೆಲ್ಲರು ಭೂ-ಮಂಡಲಕ್ಕೆ ಪಾಂಡುರಂಗವಿಠ್ಠಲ ಪರದೈವವೆಂದು.. ಪುರಂದರದಾಸರು ಆಗಿನ ಕಾಲಕ್ಕೆ ಹೇಳಿದ್ದು. ಚಿಕ್ಕಂದಿನಲ್ಲಿ ನನ್ನೂರು ದೊಡ್ಡಜಾಲದಲ್ಲಿ ಕಂಡಂತಹ ಮೊದಲ ಭಿತ್ತಿ ಪತ್ರಗಳು.. ಚಿಕ್ಕಜಾಲದ ಸಿನಿಮಾ ಟೆಂಟ್ ನಲ್ಲಿ ಬರುತ್ತಿದ್ದ ಚಲನ ಚಿತ್ರಗಳ ವಿಚಾರ ತಿಳಿಸುವ ಪೋಸ್ಟರ್ ಗಳು. ನಂತರ ತುಂಬಾ ಕಣ್ಣಿಗೆ ಬಿದ್ದಂತಹ ಗ...