Posts

Showing posts from November, 2024

Camp - ಶಿಬಿರ - NCC

Image
ಸ್ನೇಹ ಸೇವಾ ಟ್ರಸ್ಟ್ ನ ಕೆಲವು ಕಾರ್ಯಕ್ರಮಗಳ ಆಯೋಜನೆಯಲ್ಲಿ ನನ್ನ ಕಿರು ಪಾತ್ರವೂ ಇದೇ ಎಂಬುದು ಮನಸ್ಸಿಗೆ ಮುದ ಕೊಡುವ ಸಂಗತಿ . ಅಂತಹ ಒಂದು ಕಾರ್ಯಕ್ರಮವೇ ನವೆಂಬರ್ 17, 18 ಭಾನುವಾರ,  ಸೋಮವಾರ ನಡೆದ ವ್ಯಕ್ತಿತ್ವ ವಿಕಸನ ಶಿಬಿರ. ಇದರಲ್ಲಿ ಭಾಗವಹಿಸಿದವರು, ಸ್ನೇಹ ಸೇವಾ ಟ್ರಸ್ಟ್ ನ ವಿವಿಧ ಕಾರ್ಯಕ್ರಮಗಳ ಪ್ರಯೋಜನ ಪಡೆಯುತ್ತಿರುವ   ಹೈಸ್ಕೂಲ್ ಮತ್ತು ಕಾಲೇಜ್ ಮಕ್ಕಳು.     ಈ ಶಿಬಿರದಲ್ಲಿ ರಸಪ್ರಶ್ನೆಯ ಮೂಲಕ ಮಕ್ಕಳೊಂದಿಗೆ ಸಂವಹನ ಮಾಡಿದ್ದು ನನಗೆ ತುಂಬಾ ಖುಷಿ ಕೊಟ್ಟ ವಿಷಯ. ಮಕ್ಕಳ ಜ್ಞಾನದ ಮಟ್ಟ, ಭಾಗವಹಿಸುವಾಗಿನ ಉತ್ಸಾಹ ಸ್ಪೂರ್ತಿದಾಯಕವಾಗಿತ್ತು.   ಮುಕ್ತಾಯ ಸಮಾರಂಭದಲ್ಲಿ ಮಕ್ಕಳು ಅವರ ಅನುಭವಗಳನ್ನು ಹಂಚಿ ಕೊಳ್ಳುವಾಗ .. ಇದು ನನ್ನ ಮೊದಲನೆಯ ಶಿಬಿರ, ಕ್ಯಾಂಪ್   ಫೈರ್ ಅನುಭವ.. ಆಟೋಟಗಳು... ಊಟ/ ತಿಂಡಿ ಹೀಗೆ ಅವರದೇ ಆದ ಆಲೋಚನೆಯ ಮಾತುಗಳು ಕೇಳಲು ಚೆನ್ನಾಗಿತ್ತು. ಆ ಕಾರ್ಯಕ್ರಮದ ಸಿಂಹಾವಲೋಕನದ ವಿಡಿಯೋ ತುಣುಕು ನಿಮಗಾಗಿ. ಕೆಳಗಿನ link  select  ಮಾಡಿ  open option ನಂತರ drive icon ಒತ್ತಿ ವೀಡಿಯೋ ನೋಡಿ... https://drive.google.com/file/d/1aYV6IGoEy-SISm1Fn92g1fo1tWv4WIRk/view?usp=drivesdk ವಿದ್ಯಾರ್ಥಿ ಜೀವನದಲ್ಲಿ ಇಂತಹ ಒಂದೇ ಒಂದು ಅನುಭವ ನನಗಾಗಿದ್ದು... ಅದು NCC camp  ಮೂಲಕ, ಓದಿನ ಕೊನೆಯ ಘ...

ಆಪ್ತ ಸಮಾಲೋಚಕನಾಗಿ...

Image
  ಹೊಸ ಸಣ್ಣ ಕಾರ್ಖಾನೆಯನ್ನು ಶುರು ಮಾಡಿ... ಕಷ್ಟಗಳನ್ನು ಅನುಭವಿಸಿ ಅದರಿಂದ ಹೊರಬಂದು ಹೊಸ ಜೀವನವನ್ನು ಕಟ್ಟಿಕೊಂಡು.. ಎಲ್ಲ ಕೋಟಲೆಗಳನ್ನು ನಿವಾರಿಸಿಕೊಂಡು.. ಹೊಟ್ಟೆಯೂ ತುಂಬಿದಾಗ... ಮನಸ್ಸಿನಲ್ಲಿ ಒಂದು ಭಾವ ಮೂಡಿತು ಏನಾದರೂ ಮಾಡಬೇಕೆಂದು... ಅದು ಹಣ ಸಂಪಾದನೆಯ ಗುರಿ ಆಗಿರಬಾರದು... ಸಾಧ್ಯವಾದರೆ ಸಮಾಜದ ಋಣ ಭಾರವನ್ನು ತೀರಿಸುವ ದಾರಿಯಲ್ಲಿರಬೇಕು. ಏನು ಮಾಡಬೇಕೆಂಬ ಗೊತ್ತು ಗುರಿಯಿಲ್ಲದೆ... ಬರೀ ಚಿಂತನೆಯ/ ಸ್ನೇಹಿತರ ಜೊತೆ ಮಾತುಕತೆಯ ರೂಪದಲ್ಲೇ ಕೆಲ ದಿನ ಇತ್ತು. ಹೀಗೊಂದು ಸಂಜೆ ನನ್ನ ಸ್ನೇಹಿತ ಆನಂದ್ ಅವರ ಫ್ಯಾಕ್ಟರಿಯಲ್ಲಿ  ಕೂತು ಹರಟೆ ಹೊಡೆಯುತ್ತಿದ್ದಾಗ.. ಮತ್ತೆ ಬಂತು ಈ ವಿಷಯ... ಕಾಕತಾಳಿಯವಾಗಿ.. ಅವರ ತಲೆಯಲ್ಲಿದ್ದ ಪ್ರಸನ್ನ ಆಪ್ತ ಸಲಹಾ ಕೇಂದ್ರದಲ್ಲಿ ನಡೆಯುವ ಆಪ್ತ ಸಮಾಲೋಚಕರ ತರಬೇತಿ ಶಿಬಿರದ ಬಗ್ಗೆ ಹೇಳಿದರು. ಆಪ್ತ ಸಮಾಲೋಚನೆ ಎಂಬುವ ವಿಷಯದಲ್ಲಿ ಏನೇನೂ ಜ್ಞಾನವಿಲ್ಲದಿದ್ದರೂ, ಯಾಕೆ ಪ್ರಯತ್ನ ಮಾಡಬಾರದು ಎಂಬ ಪ್ರಶ್ನೆ ನಮ್ಮ ಮುಂದೆ ಬಂತು. ತಕ್ಷಣ ಅವರು ಯಾರಿಗೋ ಫೋನ್ ಮಾಡಿ ವಿಚಾರಿಸಿದಾಗ.. ಈಗಾಗಲೇ ಒಂದು ಕ್ಲಾಸ್ ಆಗಿದೆ ಎಂದು ತಿಳಿಯಿತು. ನಾವಿಬ್ಬರೂ ಒಂದು ನಿರ್ಧಾರಕ್ಕೆ ಬಂದು ಹೇಗಾದರಾಗಲಿ, ಹೋಗಿ ಸೇರಿಕೊಳ್ಳೋಣ, ಸಲ್ಪ ಸಮಯ ನೋಡಿ, ಇಷ್ಟವಾದರೆ ಮುಂದುವರಿಸುವುದು ಇಲ್ಲದಿದ್ದರೆ....              ದೈವೇಚ್ಚೆ 1992 ರಲ್ಲಿ ಶುರುವಾದ ಈ ಕಾಯಕ ಇಂದೂ...

ಚಾಕು ಚೂರಿ ಕತ್ರಿಗೆ ಸಾಣೆ...

Image
  ಚಾಕು ಚೂರಿ ಕತ್ರಿಗೆ ಸಾಣೆ.. ಚೂಪು ಮಾಡಿಕೊಡ್ತೀವಿ ಅಂತ ಕೂಗುತ್ತಾ ಹೆಗಲ ಮೇಲೆ ಮಿಷಿನ್(!) ಹೊತ್ತು ಬರುತ್ತಿದ್ದದ್ದು ನಾವು ಚಿಕ್ಕವರಿದ್ದಾಗ... ಕ್ರಮೇಣ ಅದು ಸೈಕಲ್ ಮೇಲೆ ಬರಲು ಶುರು. ಈಗಂತೂ ಬನ್ನಿ ಅಮ್ಮ, ಬನ್ನಿ ಸಾರ್ ಅಂತ ರೆಕಾರ್ಡ್ ಮಾಡಿದ್ದನ್ನು ನಮಗೆ ಕೇಳಿಸುತ್ತಾ ಟಿ ವಿ ಎಸ್ ಗಾಡಿಯ ಮೇಲೆ ಬರುವವರೆಗೂ  ಬದಲಾಗಿದೆ. ಚಾಕು, ಚೂರಿ, ಕತ್ರಿ, ಮಚ್ಚು, ಕೊಡಲಿ, ರಂಪ, ಗರಗಸ,  ಹೀಗೆ ಯಾವುದೇ ಕತ್ತರಿಸುವ ಸಾಧನವನ್ನು ಚೂಪು (ಹರಿತ) ಮಾಡಿ ಸುಸ್ಥಿತಿಯಲ್ಲಿ ಇದ್ದರೆ ಕೆಲಸ ಹಗುರ.   ತಕ್ಷಣ ನೆನಪಿಗೆ ಬರುವುದು ಚಂದಮಾಮದಲ್ಲಿ ಓದಿದ್ದ ಒಂದು ಕಥೆ... ಒಂದು ಗುರುಕುಲ.. ಮಳೆಗಾಲ ಸಮೀಪಿಸುತ್ತಿದ್ದಂತೆ... ಉರುವಲಿಗಾಗಿ ಸೌದೆ ಶೇಖರಿಸುವುದು ಅನಿವಾರ್ಯ... ಗುರುಕುಲದ ಮಕ್ಕಳು ಆ ಕೆಲಸ ಮಾಡಬೇಕು. ಇದ್ದುದರಲ್ಲಿ ಇಬ್ಬರು ದೊಡ್ಡ ಮಕ್ಕಳಿಗೆ ಆ ಕೆಲಸವನ್ನು ವಹಿಸಲಾಯಿತು... ಒಬ್ಬ ಶ್ರಮಜೀವಿ ಕಷ್ಟಪಟ್ಟು ಕೆಲಸ ಮಾಡುವವ, ಮತ್ತೊಬ್ಬ ಅಷ್ಟೇನೂ ಶಕ್ತನಲ್ಲ ಆದರೆ ಜಾಣ. ಮೊದಲೆರಡು ದಿನಗಳು ಶ್ರಮಜೀವಿ ನಾಲ್ಕೈದು ದಿನಕ್ಕೆ ಆಗುವಷ್ಟು ಸೌದೆ ಕತ್ತರಿಸಿ ಜೋಡಿಸಿದ ಆದರೆ ಇನ್ನೊಬ್ಬ ಮಾತ್ರ ಎರಡೇ ದಿನಕ್ಕಾಗುವಷ್ಟು. ನಂತರದ ದಿನಗಳಲ್ಲಿ ನಮ್ಮ ಶ್ರಮಜೀವಿ ಕತ್ತರಿಸಿ ಜೋಡಿಸಿದ್ದು ಕಡಿಮೆಯಾಗುತ್ತಾ ಬಂದು, ಒಂದು ದಿನಕ್ಕಾಗುವಷ್ಟೂ ಜೋಡಿಸಲಾಗಲಿಲ್ಲ.. ಆದರೆ ಶಕ್ತನಲ್ಲದ ಹುಡುಗ ಎಲ್ಲ ದಿನಗಳೂ ಒಂದೇ ಸಮನೆ ಎರಡೇ ದಿನಕ್ಕಾಗುವಷ್...

ನೀರು ತುಂಬುವ ಹಬ್ಬ ...

Image
ಬೆಳಗಿನ walk ನಲ್ಲಿ ಕನ್ನಡದ "ವಾಕ್ ಪ್ರವಾಹ " ಜೋರಿತ್ತು.. ಹಾಗೇ ವಿಷಯ ದೀಪಾವಳಿ ಹಾಗೂ ನೀರು ತುಂಬುವ ಹಬ್ಬದ ಬಗ್ಗೆ ತಿರುಗಿತು... ಅವರವರ ವಿಶ್ಲೇಷಣೆಗಳು.. ಅನುಭವಗಳು ಹೊರಬಂದವು. ಈ ಮಧ್ಯೆ ಗೆಳೆಯ ವಾಸುದೇವ ಒಂದು ಬಾಣ ಬಿಟ್ಟರು... ಗುರಿ ನನ್ನ ಕಡೆಗೆ ನೇರವಾಗಿತ್ತು. " ಇನ್ನ ರಂಗಣ್ಣನ ಕಡೆಯಿಂದ ಬರುತ್ತೆ ಒಂದು ಬ್ಲಾಗು... ನೀರು ತುಂಬುವ ಹಬ್ಬ ನಮ್ಮ ಹಳ್ಳೀಲಿ ಹಂಗೆ ಹಿಂಗೆ.. ಅಂತ ಎಲ್ಲಾ".. ಅದರಲ್ಲಿ ಹಾಸ್ಯ ವ್ಯಂಗ್ಯ ಪ್ರೀತಿ ಎಲ್ಲ ತುಂಬಿತ್ತು ಅಂತ ನನಗನ್ನಿಸ್ತು.. ಆದರೆ ನನಗೆ ಸಿಕ್ಕಿದ್ದು ಮಾತ್ರ ಸ್ಪೂರ್ತಿ... ಹೌದಲ್ಲ ಈ ಸಂಧರ್ಬಕ್ಕೆ ಬ್ಲಾಗ್ ಬರೆಯಲು ಒಂದು ವಿಷಯ ಸಿಕ್ತು ಅಂತ... ಮನಸ್ಸು ಸಹಜವಾಗಿ ಅದರ ಬಗ್ಗೆ ಒಂದು ಯೋಚನೆ ಮಾಡ್ತು. ನೀರು ತುಂಬುವ ಹಬ್ಬ... ದೀಪಾವಳಿಯ ಸಂಭ್ರಮದ ಮೊದಲ ದಿನ... ಸಂಜೆ ಎಂದರೂ ಸರಿಯೇ... ಮೊದಲು ನೆನಪಿಗೆ ಬರುವುದೇ.. ನಮ್ಮ ದೊಡ್ಡಜಾಲದ ಮನೆಯಲ್ಲಿದ್ದ ವಿಶಾಲವಾದ ಬಚ್ಚಲು ಮನೆಯ ಹಂಡೆ.. ಕಂಠವಿಲ್ಲದ, ಅರ್ಧ ಹೊರ ಮೈ ಮಸಿಯಿಂದ ಕೂಡಿದ... ಇನ್ನರ್ಧ ಮಾತ್ರ ಥಳ ಥಳ ಹೊಳೆಯುತ್ತಾ, ದೊಡ್ಡದಾದ ಬೊಚ್ಚು ಬಾಯಿಯ ಒಲೆಯ ಮೇಲೆ ಕೂತಿರುತ್ತಿದ್ದ ದೃಶ್ಯ . ಅದಕ್ಕೆ ಸುಣ್ಣದ ಪಟ್ಟೆ ಬಳಿದು ಮೇಲೆ ಅರಿಶಿನ ಕುಂಕುಮ ಇಟ್ಟು, ತುಂಬಿ ತುಳುಕುವಷ್ಟು ನೀರು ಹಾಕಿ.. (ಜೊತೆಗೆ ಕೆಲಸೊಪ್ಪುಗಳನ್ನು ಹಾಕಿರುತ್ತಿದ್ದ ನೆನಪು). ಪಕ್ಕದಲ್ಲಿ ಬಚ್ಚಲು ಮನೆಯ ಬಿಂದಿಗೆಗಳು, ತಂಬಿಗೆ, ಬೋಸಿ ತಪ್ಪಲ...