ಗುರುಪೂರ್ಣಿಮೆ

ಮೊನ್ನೆ ಭಾನುವಾರ ಗುರುಪೂರ್ಣಿಮೆಯ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಗುರುಪೂರ್ಣಿಮೆಯ ಶುಭಾಶಯಗಳು ಹಾಗೂ ಸಂಬಂಧಪಟ್ಟ ವಿಷಯಗಳ ಬಗ್ಗೆ ಮೆಸೇಜುಗಳ ಮಹಾಪೂರವೇ ಹರಿದು ಬಂತು. ಗುರುಪೂರ್ಣಿಮೆಯ ಆಚರಣೆ ಹಿಂದಿನಿಂದ ಇತ್ತಾದರೂ... ಅದು ಜನಮಾನಸದ ಎಲ್ಲ ಸ್ತರದ ಜನರನ್ನು ಮುಟ್ಟಿರಲಿಲ್ಲ.... ಸಾಮಾಜಿಕ ಜಾಲತಾಣದ ಕೃಪೆಯಿಂದಾಗಿ.. ಇಂದು ಬಹು ಜನರನ್ನು ಮುಟ್ಟಿದೆ... ಹಾಗೂ ಈ ವಿಷಯ ಜನಜನಿತವಾಗಿದೆ. ಇದೊಂದು ಧಾರ್ಮಿಕ ಆಚರಣೆಯೇ ಆಗಿಲ್ಲದೆ... ಸಾಮಾಜಿಕವಾಗಿಯೂ ಆಚರಣೆಯಲ್ಲಿ ಇದೆ... ತಮಗೆ ಇಷ್ಟವಾದ ಗುರುಗಳನ್ನು ಆದರಿಸಿ ಸತ್ಕರಿಸಿ ಗೌರವ ತೋರಿಸಿ, ಕೃತಜ್ಞತೆ ಸಲ್ಲಿಸುವ ಮೂಲಕ. ಅದರಲ್ಲೂ ಸಂಗೀತ ಕ್ಷೇತ್ರದಲ್ಲಿ ಗುರು ವಂದನೆಗೆ ಹೆಚ್ಚಿನ ಪ್ರಾಮುಖ್ಯತೆ. ನಮ್ಮ ಸಂಸ್ಕೃತಿಯಲ್ಲಿ... ಅಪ್ಪ ಅಮ್ಮನ ನಂತರದ ಸ್ಥಾನ ಗುರುವಿಗೆ. " ಮಕ್ಕಳಿಸ್ಕೂಲ್ ಮನೇಲಲ್ವೇ" ಎಂಬ ಕೈಲಾಸಂ ಮಾತಿನಂತೆ.. ತಾಯಿಯೇ ಮೊದಲ ಗುರು. " ಅಜ್ಞಾನಾತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ" ಅಜ್ಞಾನದಿಂದ ಕುರುಡಾದವನ ಕಣ್ಣುಗಳನ್ನು ಜ್ನಾನಾಂಜನ ಎಂಬ ಸಲಾಕೆಯಿಂದ.. ಕಣ್ಣನ್ನು ತೆರೆಸಿದವನೇ ಗುರು. ವರ್ಣಮಾತ್ರಂ ಕಲಿಸಿದಾತಂ ಗುರು ಎನ್ನುವ ಹೇಳಿಕೆಯೂ ಇದೆ. ಗುರುವಿನ ಬಗ್ಗೆ ಇಂತಹ ಸಾಲುಗಳು ಅನೇಕವು.. ಬಗೆದಷ್ಟೂ ಸಿಗುವಂತಹವು. ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರದ ಶಿವನನ್ನು ಆದಿ ಗುರು ಎಂದು ಕರೆಯುವು...