ಪರೀಕ್ಷೆ- ಜೀವನ

ಮೊನ್ನೆ ಪೇಪರ್ ನಲ್ಲಿ ಬಂದ ಸುದ್ದಿ...CET ಪರೀಕ್ಷೆಯಲ್ಲಿ ಕೊಟ್ಟ ಪ್ರಶ್ನೆಗಳು... ಸಿಲಬಸ್ ನಿಂದ ಹೊರತಾಗಿತ್ತು... ಎಂದು. ವಿದ್ಯಾರ್ಥಿಗಳು ಪೋಷಕರು ಹಾಗೂ ಕೆಲ ಕಾಲೇಜುಗಳಿಂದ ಖಂಡನೆ... ಮರು ಪರೀಕ್ಷೆಯು ನಡೆಯಬಹುದೇನೋ ಎಂಬ ಸೂಚನೆ. ಮರು ಪರೀಕ್ಷೆ ಅಂದಾಕ್ಷಣ ನನ್ನ ಮನಸ್ಸು ಹೋಗಿದ್ದು ನನ್ನ ಹತ್ತನೆಯ ತರಗತಿಯ ವರ್ಷಕ್ಕೆ. ನಾನು 10ನೇ ತರಗತಿ (SSLC) ಪರೀಕ್ಷೆಯನ್ನು ಎರಡು ಸಲ ಬರೆದಿದ್ದೇನೆಂಬ ಹೆಮ್ಮೆ.. ಸಾಮಾನ್ಯವಾಗಿ ಎರಡನೆಯ ಬಾರಿ ಪರೀಕ್ಷೆ ಬರೆದಿದ್ದರೆ... ಅದು ಫೇಲಾದ ಸೂಚನೆ ಹಾಗೂ ಕೆಲ ಮಟ್ಟಿಗೆ ಅವಮಾನಕರ... ಅಲ್ಲವೇ. ಆದರೆ ನನ್ನ ವಿಷಯದಲ್ಲಿ (ಆ ವರ್ಷದ ಎಲ್ಲ 10ನೇ ತರಗತಿಯ ವಿದ್ಯಾರ್ಥಿಗಳ ವಿಷಯದಲ್ಲಿ) ಹಾಗಲ್ಲ. ನಮ್ಮದೇ ವೈಶಿಷ್ಟ್ಯ. ಆಗಷ್ಟೇ ಶುರುಮಾಡಿದ್ದ ಹೊಸ ಶೈಲಿಯ... ಮೊದಲನೆಯ ತಂಡ ನಮ್ಮದು. ಪ್ರಶ್ನೆ ಪತ್ರಿಕೆಯು ಹೊಸ ತರಹ.. new type questions ಸಮೇತ.. ಹಾಗಾಗಿ ನಮಗೆ ಒಂದಷ್ಟು ಕುತೂಹಲ ...ಸಾಕಷ್ಟು ಭಯ. ಸುದೈವದಿಂದ ಎಲ್ಲವೂ ಸರಾಗವಾಗಿ ನಡೆಯುತ್ತಿತ್ತು.... ಅಲ್ಲಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಗುಸು-ಗುಸು... ಗಣಿತದ ಪರೀಕ್ಷೆ ಎರಡು ದಿನ ಇರುವಾಗ... ನನ್ನಣ್ಣ ಒಂದು ಟೈಪ್ ಮಾಡಿದ ಪ್ರಶ್ನೆ ಪತ್ರಿಕೆ ತಂದುಕೊಟ್ಟ... ಅದು ಗಣಿತ ಪ್ರಶ್ನೆ ಪತ್ರಿಕೆಯ ತದ್ರೂಪು... ಅದು ಯಾವ ಮಟ್ಟದಲ್ಲಿ ಪ್ರಸಾರವಾಗಿತ್ತು ಎಂದರೆ ಗಾಂಧಿಬಜಾರ್ ನಲ್ಲಿ ಹಂಚುವಷ್ಟು. ನಾನು ಎಷ್ಟರ...