ಮದುವೆ - ಒಂದು ಚಿಂತನೆ

Marriages are made in heaven ಅನ್ನುವುದು ಇಂಗ್ಲೀಷಿನ ಚಿರಪರಿಚಿತ ನಾಣ್ಣುಡಿ. ನಮ್ಮ ಸಂಸ್ಕೃತಿಯಲ್ಲಿ ಅದನ್ನು " ಋಣಾನುಬಂಧಂ ರೂಪೇಣ ಪಶು ಪತ್ನಿ ಸುತಾಲಯಃ" ಎಂದು ವಿಶಾಲ ತಳಹದಿಯಲ್ಲಿ ಹೇಳಿದ್ದಾರೆ. ಈ ಹೇಳಿಕೆ ಗಂಡಿನ ಕೇಂದ್ರಿತವಾದರೂ... ಪತಿ ಪತ್ನಿಯ ಸಂಬಂಧ ಮೊದಲೇ ನಿರ್ಧಾರವಾದಂತೆ ಸೂಚಿಸುತ್ತದೆ... ಏಳೇಳು ಜನ್ಮದ ಸಂಬಂಧ ಅಂತಾರಲ್ಲ.. ಹಾಗೆ ( ಏಳೇ ಯಾಕೋ ಗೊತ್ತಿಲ್ಲ...ಕೆಲ ಸಲ ನನ್ನಹೆಂಡತಿ ಏಳೇಳು ಜನ್ಮಕ್ಕೂ ನೀವೇ ನನ್ನ ಗಂಡ ಎಂದು ಹೇಳಿದಾಗ.. ನಾನು ದೇವರನ್ನು ಕೇಳಿದ್ದಿದೆ....ಇದೇ 7 ನೇ ಜನ್ಮ ಆಗಲೀಂತ...ಇದು ನನ್ನಾಕೆಗೆ ಇಷ್ಟವಾಗದ್ದು..ಮುನಿಸು ತರುವಂತದ್ದು...ಅದಕ್ಕೇ.. ನನಗೆ ಇಷ್ಟವಾಗುವುದು). ಎಲ್ಲಿಯೋ ಇದ್ದ ಹೆಣ್ಣು... ಇನ್ನೆಲ್ಲಿಯೋ ಇದ್ದ ಗಂಡಿನೊಡನೆ ಒಂದಾಗಿ ಬಾಳುವ ಈ ಮದುವೆ ಎನ್ನುವ ಸಂಬಂಧ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ... ಎತ್ತಣ ಮಾಮರ ಎತ್ತಣ ಕೋಗಿಲೆ .. ಎಷ್ಟು ಸೂಕ್ತ ಅಲ್ಲವೇ? ಕೆ.ಎಸ್. ನ. ಹೇಳಿದಂತೆ... ಒಂದು ಗಂಡು ಒಂದು ಹೆಣ್ಣು ಹೇಗೋ ಸೇರಿ ಹೊಂದಿಕೊಂಡು, ಕಾಣದೊಂದ ಕನಸು ಕಂಡು..... ಜೀವನ ಮುಂದುವರಿಸೋದು.... ಈ ಚಿಂತನೆ ನನ್ನ ಮನಸ್ಸಿನಲ್ಲಿ ಬರಲು ಕಾರಣ ಫೆಬ್ರವರಿಯಲ್ಲಿ ನಾನು ಭಾಗವಹಿಸಿದ ಎರಡು ಮದುವೆಗಳು.... ಎರಡರಲ್ಲೂ ಒಂದಷ್ಟು ಸಾಮ್ಯ.... ಹೆಣ್ಣು ಗಂಡು ಇಬ್ಬರೂ ವಿದೇಶದಲ್ಲಿ ನೆಲೆಸಿರುವವರು... ಒಂದು ಜೋಡಿ ನೆಲೆಸಿರುವುದು ಇಂಗ್ಲೆಂಡ್ ನಲ್ಲಿ... ಇಬ್ಬರೂ ಕ...