Posts

Showing posts from June, 2021

ಸಮಯಕ್ಕೊಂದು ಸಹಾಯ ಹಸ್ತ

Image
  "ಕರುಣಾಳು ಬಾ ಬೆಳಕೆ ಮುಸುಕೀದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು...." ಇದು ಪ್ರಾಯಶಃ ಇಂದಿನ ತಲೆಮಾರಿನ ಬಹು ಹಿರಿಯ ನಾಗರೀಕರ ಅಳಲು. ಯಾಕೋ ಈಚೀಚೆಗಂತೂ ಹಿರಿಯರ ಮೇಲಿನ ದೌರ್ಜನ್ಯ ಜಾಸ್ತಿಯಾಗುತ್ತಿದೆ. .. ಯುವ ಜನಾಂಗದ ದುರಾಸೆಯೋ... ಸ್ವಾರ್ಥವೋ...ಅಥವಾ ಸುಲಭವಾಗಿ ಹಣ / ಆಸ್ತಿ ದಕ್ಕಿಸಿಕೊಳ್ಳುವ ಅಭಿಲಾಷೆಯೋ...ತಿಳಿಯದಾಗಿದೆ. ಜೂನ್ ೧೫ "ಹಿರಿಯ ನಾಗರೀಕರ ಮೇಲಿನ ದೌರ್ಜನ್ಯದ ಬಗ್ಗೆ ಅರಿವು ಮೂಡಿಸುವ ದಿನ" (world eleder abuse awareness day) ಆಗಿ ಆಚರಿಸಲಾಗುತ್ತಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಒಂದು ಅಭಿಯಾನ. ಹಾಗಾಗಿ ಇದನ್ನು ನಾವೂ ಸಹ ಕೆಲ ಮಟ್ಟಿಗೆ ಆಚರಿಸಿದೆವು - ವಯೋಮಾನಸ ಸಂಜೀವಿನಿ - ಯ ಮೂಲಕ. "ವಯೋಮಾನಸ ಸಂಜೀವಿನಿ" - ಇದು Geriatric services and clinic, NIMHANS, Bengaluru ಇದರ ಒಂದು ಉಪಕ್ರಮ. ನೆನ್ನೆ ಸಂಜೆ (28.06.2021) "ವಯೋಮಾನಸ ಸಂಜೀವಿನಿ" ಒಂದು WEBINAR ಆಯೋಜಿಸಿತ್ತು. ವಿಷಯ: ಹಿರಿಯ ನಾಗರೀಕರ ಮೇಲಿನ ದೌರ್ಜನ್ಯದ ಬಗ್ಗೆ ಅರಿವು ಹಾಗೂ "Maintenace and welfare of Parents and Senior citizens Act 2007" ಇದರ ಸಾಧಕ ಭಾದಕಗಳು. ಈ ಕಾರ್ಯಕ್ರಮದಲ್ಲಿ ಶ್ರೀ. ಶಶಿಧರ್ ಶೆಟ್ಟಿ ( District Judge (OOD), Member Secretary, Karnataka State Legal Services Authority.), ಡಾ. ರವೀಂದ್ರನ...

ನನ್ನ ಶಾಲೆ, ನಮ್ಮೂರ ಆಂಜನೇಯ

Image
ಕೆಲದಿನಗಳ ಹಿಂದೆ airport ಗೆ ಹೋ ಗುತ್ತಿದ್ದಾಗ, ದಾರಿಯಲ್ಲಿ ತುಂಬ ವಾಹನ ಸಂಚಾರವಿದ್ದು ತಡ ಆಗುತ್ತಿತ್ತು. ನಮ್ಮ ಕಾತುರ ಗಮನಿಸಿ taxi driver ಬೇರೊಂದು ದಾರಿಯಲ್ಲಿ ಕರೆದುಕೊಂಡು ಹೋಗುವುದಾಗಿ ಹೊರಟ. ಅಚಾನಕ್ಕಾಗಿ ನನಗೆ "ದೊಡ್ಡಜಾಲ" ರೈಲ್ವೇ ನಿಲ್ದಾಣ ಕಣ್ಣಿಗೆ ಬಿತ್ತು. ಮನಸ್ಸು ಗರಿಗೆದರಿತು. ದೊಡ್ಡಜಾಲ ನಾನು ಹುಟ್ಟಿ 8ನೇ ತರಗತಿವರೆಗೂ ಓದಿದ ಹಳ್ಳಿ. ಕೆಲ ನಿಮಿಷಗಳಲ್ಲಿ ನಮ್ಮ ಕಾರ್ ದೊಡ್ಡಜಾಲ ಊರ ಮುಂದೆ ಬಂತು. ನಾನು ಓದಿದ ಶಾಲೆ ಕಂಡಾಗ ನನ್ನ ಖುಷಿಗೆ ಮೇರೆಯೇ ಇರಲಿಲ್ಲ. 4-5 ನಿಮಿಷಗಳ ಕಾಲ ಅಲ್ಲಿ ಕಳೆಯಲು taxi driver ಮನ ಒಲಿಸಿದೆ. ಶಾಲೆ, ಆಂಜನೇಯ ದೇವಸ್ಠಾನ, ಅಶ್ವತ್ಥಕಟ್ಟೆ, ವೀರಭದ್ರ ದೇವಸ್ಠಾನ ಎಲ್ಲಾ ಸುತ್ತಿದೆ. ಸಮಯದ ಅಭಾವ, ಬೇಗ ಹೊರಡ ಬೇಕಾಯಿತು. ಪ್ರಯಾಣ ಮುಂದುವರಿಯಿತು, ಮನಸ್ಸು ನೆನಪಿನ ಲೋಕಕ್ಕೆ ಜಾರಿತು: ಆ ದಿನಗಳಲ್ಲಿ ಶಾಲೆಯಲ್ಲಿ ಕೂತಾಗ ತರಗತಿಯ ಕಿಟಕಿ ಬಾಗಿಲಿನಿಂದ ಕಾಣುತ್ತಿದ್ದದ್ದು ಆಂಜನೇಯ ದೇವಸ್ಥಾನ. ನಮಗೆ ಬಾಯಾರಿದಾಗಲೆಲ್ಲ ಅಥವಾ ನೀರು ಕುಡಿಯಬೇಕೆನಿಸಿದಾಗಲೆಲ್ಲ (ಇದು ಬಹಳ ಸಲ ಆಚೆ ಹೋಗಲು ಒಂದು ಕಾರಣ) ಆಂಜನೇಯ ದೇವಸ್ಠಾನದ ಭಾವಿಯೇ ನಮಗೆ ನೀರಿನ ತಾಣ. ತೀರ ಚಿಕ್ಕವರಿದ್ದಾಗ ಅಲ್ಲಿನ ನೀರಿನ ಕೊಡದಲ್ಲಿ ಕುಡಿಯುವುದು, ಹಾಗೂ ಸ್ವಲ್ಪ ದೊಡ್ದವರಾದಾಗ - ಅಂದರೆ ಈಜು ಕಲಿತಮೇಲೆ- ಭಾವಿಯಲ್ಲಿ ಇಳಿದು ನೀರು ಕುಡಿಯುವುದು. ಹೀಗೆ ಆಂಜನೇಯನ ಹೆಸರು ದಿನಕ್ಕೆಷ್ಟು ಬಾರಿ ಬರುತ್ತಿತ್ತೊ ಆ ಆಂಜ...

ಅನೂಗೆ ಕೃಷ್ಣನ ಚಿಂತೆ - ನಂದೊಂದು ಕವಿತೆ

Image
  ಇವತ್ತು ನನ್ನ whatsup ಗೆ ಬಂದಿದ್ದ ಒಂದು  ಫೋಟೋ ನೋಡಿದೆ. ತಕ್ಷಣ ಅದು ಏನೆಂದು ಹೊಳೆಯಲಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಕಾಗದದ ತುಣುಕಿನ ಮೇಲೆ ಬರೆದಿರುವುದು ಕಂಡಿತು. ಏನೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಮೊದಲು ಕಂಡದ್ದು "7th july,2004, wednesday 10.45" ಮತ್ತೆ ಗಮನಿಸಿದಾಗ "ರಂಗನಾಥ್ ಸರ್" ಕಾಣಿಸಿತು. ಮಿಕ್ಕಿದ್ದೆಲ್ಲಾ ಕನ್ನಡ ಬರಹ, ಆದರೆ ಸ್ಪಷ್ಟವಾಗಿ ಕಾಣದು. ಇದನ್ನು ಕಳಿಸಿದ್ದು ನನ್ನ ಪರಿಚಯದ ಅನು (ಅನುರಾಧ). ಕುತೂಹಲದಿಂದ ಕಷ್ಟಪಟ್ಟು ಓದಿದೆ. ಅದು ನನ್ನದೇ ಕೈಬರಹ. ಅದರ ಪೂರ್ಣಪಾಠ ಹೀಗಿದೆ: ಗೋಕುಲದ ಗೋಪಿಯರು ಕೃಷ್ಣನನು ದೂರುವರು ಅವನು ಬಲು ದುಷ್ಟನೆಂದು ಯಾವ ಮಾತಿಗೂ ಕಿವಿಗೊಡದೆ ಮನದೆ ನೊಂದರೂ ಯಶೋದೆ ರಮಿಸಿದಳು ತನ್ನ ಮಗನನಂದು ಆಗಲಿಲ್ಲವೆ ಕೃಷ್ಣ ಮುಂದೆ ಜಗದೊಡೆಯ ಎಲ್ಲರ ಒಳಿತನ್ನು ಬಯಸುವ ಸಹೃದಯ ಯಶೋದೆ ನಿರಾಶೆಗೊಂಡಿದ್ದರೆ ಅಂದು ಕೃಷ್ಣಚರಿತೆಯೆ ಬೇರೆ ಇರುತಿತ್ತು ಇಂದು ಮನಸ್ಸು ಹಿಂದಕ್ಕೋಡಿತು: ಅಂದು ಅನು ತನ್ನ ಮಗನ ಬಗ್ಗೆ ನೊಂದಿದ್ದಳು. ಮುಂದೆ ಎನಿದೆಯೊ ಎಂದು ಆತಂಕ ಗೊಂಡಿದ್ದಳು ( ಕಾರಣಗಳು ನೆನಪಿಲ್ಲ). ಮಕ್ಕಳು ಚೆನ್ನಾಗಿರಬೇಕು, ಚೆನ್ನಾಗಾಗಬೇಕು ಅನ್ನುವ ಆಸೆ ಎಲ್ಲ ಅಮ್ಮಂದಿರದು, ಅನು ಸಹ ಅದಕ್ಕೆ ಹೊರತಾಗಿರಲಿಲ್ಲ. ಮಗ ಕೃಷ್ಣನ ಬಗ್ಗೆ ತುಂಬಾ ಚಿಂತೆಯಲ್ಲಿದ್ದಳು.ಪ್ರಾಯಶಃ ಆಗ ಕೃಷ್ಣ 1 ಅಥವಾ 2 ನೇ ತರಗತಿಯಿದ್ದಿರಬಹುದು. ನಾನೊಬ್ಬ ಆಪ್ತಸಲಹ...