ದೀಪಾವಳಿ - ಬಲಿ ಚಕ್ರವರ್ತಿ
Time and tide waits for none - ಸಮಯ ನಿಂತ ನೀರಲ್ಲ... ಅದು ಯಾರಿಗೂ, ಯಾವುದಕ್ಕೂ ಕಾಯುವುದಿಲ್ಲ... ಇದು ಪ್ರಕೃತಿಗೂ ಹೊರತಲ್ಲ. ಚಲನೆಯು ಸಮಯದ ಗುಣ. ಆಗಬೇಕಾಗಿರುವ ಘಟನೆಗಳೆಲ್ಲ ಆಯಾ ಸಮಯಕ್ಕೆ ತಾನೇ ತಾನಾಗಿ ಘಟಿಸುತ್ತಿರುತ್ತವೆ. " ಜಬ್ ಜಬ್ ಜೋ ಜೋ ಹೋನಾ ಹೈ..ತಬ್ ತಬ್ ಸೋ ಸೋ ಹೋತಾ ಹೈ" ಎನ್ನುವುದು ಒಂದು ಹಿಂದಿಯ ಹೇಳಿಕೆ. ಅದೇ ರೀತಿ , ವರ್ಷಕ್ಕೊಮ್ಮೆ ಭೂಲೋಕಕ್ಕೆ ಬಂದು ಜನರಿಂದ ಪೂಜಿಸಿಕೊಳ್ಳುವ ವರವನ್ನು, ವಿಷ್ಣುವಿನಿಂದ ಪಡೆದ ಬಲಿಚಕ್ರವರ್ತಿ, ಬರಬೇಕಾದ ದೀಪಾವಳಿಯ ಪಾಡ್ಯವೂ ಬಂತು... ಬಲಿಪಾಡ್ಯಮಿಯ ಬಲೀಂದ್ರನ ಪೂಜೆಯ ದಿನವೂ ಮುಗಿದೇ ಹೋಯಿತು. ಬಲಿ ಚಕ್ರವರ್ತಿಯ ಕಥೆ.. ಚಿಕ್ಕಂದಿನಲ್ಲಿ ಕೇಳಿದಾಗ, ನನಗೆ ಮೂಡಿದ ಪ್ರಶ್ನೆಗೆ ಇದುವರೆಗೂ ಸಮಂಜಸವಾದ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ವಾಮನನ ಅವತಾರಿ ವಿಷ್ಣು ತ್ರಿವಿಕ್ರಮನಾಗಿ ಬೆಳೆದದ್ದು ಒಪ್ಪಲು ಕಷ್ಟವಾದರೂ, ಸಾಧ್ಯ ಉಂಟು ಎಂದು ನಂಬಿದೆ. (ಆಂಜನೇಯ ಆಕಾಶದೆತ್ತರಕ್ಕೆ ಬೆಳೆದು ಲಂಕೆಗೆ ಹಾರಿದ್ದ ಉದಾಹರಣೆ ಇತ್ತಲ್ಲ ) ಆದರೆ ತ್ರಿವಿಕ್ರಮ ಇಟ್ಟ ಮೊದಲನೆಯ ಹೆಜ್ಜೆ ಭೂಮಿಯನ್ನಾವರಿಸಿದ್ದು ಒಪ್ಪಿದರೂ.. ಭೂಮಿಯ ಮೇಲಿದ್ದ ಜನರ ಪರಿಸ್ಥಿತಿ ಏನು, ಅದು ಬಿಡಿ ಬಲಿ ಚಕ್ರವರ್ತಿ ಆಗ ಎಲ್ಲಿದ್ದ ಎನ್ನುವುದು ನಿಗೂಢ. ಇಂಥ ಪ್ರಶ್ನೆ ಕೇಳಿದಾಗ, ತಲೆಹರಟೆ ಮಾಡಬೇಡ... ದೇವರ ಕಥೆ ಒಪ್ಪಿಕೋ ಬೇಕು ಅಷ್ಟೇ... ಎಂಬ ಉತ್ತರ ಸಮಾಧಾನ ತಂದಿಲ...