Posts

Showing posts from September, 2025

ಪರಿಸಮಾಪ್ತಿಯಾದ 'ಪರ್ವ'

Image
  ನಾನು ಗೌರವ ಭಕ್ತಿಯಿಂದ ನೋಡಿದ ಲೇಖಕರಲ್ಲಿ ಎಸ್ ಎಲ್ ಭೈರಪ್ಪನವರು ಅಗ್ರಗಣ್ಯರು. ಅವರು ನಮ್ಮನ್ನಗಲಿದ ಸುದ್ದಿಯನ್ನು ಕೇಳಿದಾಗ ಕೆಲ ಕ್ಷಣಗಳು ವಿಚಲಿತನಾದೆ. ವಯೋ ಸಹಜವಾದ ಸಾವು ಆದ್ದರಿಂದ, ಯಾವ ನೋವೂ ಇಲ್ಲದೆ, ಒಪ್ಪಿಕೊಳ್ಳಬೇಕೆಂಬುದು ನನ್ನ ನಿಲುವು. ಆದರೂ ಒಂದರೆಕ್ಷಣ ಸಂಕಟವಾದದ್ದು ಸತ್ಯ. " ದೇವರ ತಾವುಕ್ಕೆ ಹೋದದ್ದು, ಇನ್ನೇನು ಮಾತಾಡಿ ಸುಖವಿಲ್ಲ.. ಮುಂದಿನ ಕೆಲಸ ನೋಡೋಣ " ಎಂಬ ಗೃಹಭಂಗದ ಅಯ್ಯನವರ ಮೂಲಕ ಭೈರಪ್ಪನವರು  ಹೇಳಿದ  ಮಾತು  ಕಟು ಸತ್ಯ. ಎಸ್ ಎಲ್ ಭೈರಪ್ಪನವರ ಬಗ್ಗೆ ಮೊದಲು ಕೇಳಿದ್ದು, ನಾನು ಶಹಾಬಾದಿನಲ್ಲಿದ್ದಾಗ. ನಾನಿನ್ನೂ ನನ್ನ ಓದಿನ ಗುಂಗಿನಲ್ಲೇ  ಇದ್ದ ಕಾರಣ, ಕಾದಂಬರಿಗಳ ಬಗ್ಗೆ ಗಮನವಿರಲಿಲ್ಲ. ಆದರೆ ಸ್ನೇಹಿತರ ಗುಂಪಿನಲ್ಲಿ ನಡೆಯುತ್ತಿದ್ದ, ಭೈರಪ್ಪನವರ ಕಾದಂಬರಿಗಳ ಬಗ್ಗೆ ವಿಶ್ಲೇಷಣಾತ್ಮಕ ಚರ್ಚೆಯ ಮೂಲಕ. ಗೃಹಭಂಗದ ಗಂಗಮ್ಮನ ಬೈಗುಳ, " ಅನ್ನೆಲ್ಡಾಳುದ್ದ ಬಾವಿಗೆ  ಆರಾಳುದ್ದ ಹಗ್ಗ ಬುಟ್ರೆ ಎಟುಕುತೈತಾ"  ಎಂಬ ವಿಷಯದ ಬಗ್ಗೆ ನಡೆದ  ಚರ್ಚೆ, ನನ್ನ ಗಮನ ಸೆಳೆದದ್ದು. ಆಗ ಬಂದಿದ್ದೆ ಗೃಹಭಂಗ ಕಾದಂಬರಿಯನ್ನು ಓದಬೇಕೆಂಬುವ ಕುತೂಹಲ. ಜೀವನದ ಒಂದು ಘಟ್ಟದಲ್ಲಿ, ಗೃಹಭಂಗ ಕಾದಂಬರಿಯನ್ನು, ಗಂಗಮ್ಮನ ಬೈಗುಳದ ವೈಶಿಷ್ಟ್ಯವನ್ನು ಸವಿಯಲು ಆರಂಭ ಮಾಡಿದರೂ, ಮನಸ್ಸಿಗೆ ತಾಕಿದ್ದು ನಂಜಮ್ಮನ ಪಾತ್ರ. ನಂಜಮ್ಮನ ಪಾತ್ರದಲ್ಲಿ ಕಂಡದ್ದು ನನ್ನಮ್ಮನನ್ನು.  ಈ ವಿಷಯವನ...

ಜೀವನದರ್ಶನ - ಅವರವರ ದೃಷ್ಟಿಯಲ್ಲಿ.

Image
ನನ್ನ ಇಬ್ಬರು ಸ್ನೇಹಿತರ ಮಧ್ಯೆ ಒಂದು ಚರ್ಚೆ ನಡೆಯುತ್ತಿತ್ತು. ಚರ್ಚೆಯ ವಿಷಯ ಅವರಿಬ್ಬರಿಗೂ ತಿಳಿದ ವ್ಯಕ್ತಿಯ ಬಗ್ಗೆ. ಒಬ್ಬರ ಅಭಿಪ್ರಾಯ ಅವರು ಬಹಳ ಜನಕ್ಕೆ ಸಹಾಯ ಮಾಡಿದ್ದಾರೆ ಅದರಲ್ಲಿ ನಾನು ಒಬ್ಬ... ಇನ್ನೊಬ್ಬರ ಅಭಿಪ್ರಾಯ.. ಅವರು ಹಾಗೇನು ಮಾಡಿಲ್ಲ ನನಗೆ ಗೊತ್ತು. ಇದರಲ್ಲಿ ಯಾವುದು ಸರಿ ಯಾವುದು ತಪ್ಪು ಹೇಳುವುದು ಸಾಧ್ಯವೇ? ಇಬ್ಬರಿಗೂ ಅವರದೇ ಆದ ಅಭಿಪ್ರಾಯ ಆ ಮೂರನೆಯ ವ್ಯಕ್ತಿಯ ಬಗ್ಗೆ... ಅವರವರು ಕಂಡಂತೆ. ಜೀವನವೇ ಹಾಗಲ್ಲವೇ?. ಯಾವುದೇ ವಿಷಯವಾಗಲಿ ಅದರ ಬಗ್ಗೆ ನಮ್ಮ ಅಭಿಪ್ರಾಯ ಮೂಡುವುದು, ಆ ವಿಷಯದ ಬಗ್ಗೆ ನಮಗಿರುವ ತಿಳುವಳಿಕೆ, ಅನುಭವ ದಿಂದ ಮಾತ್ರ ನಿಲುಕುವಂಥದ್ದು. ಅಂದರೆ ನನ್ನ ಸೀಮಿತ ಜ್ಞಾನಕ್ಕೆ ನಿಲುಕುವಷ್ಟು. ಸಮುದ್ರದ ತುಂಬಾ ನೀರಿದ್ದರೂ , ಎಷ್ಟು ಬೇಕಾದರೂ ತೆಗೆದುಕೊಳ್ಳಲು ಅಡ್ಡಿ ಇಲ್ಲದಿದ್ದರೂ.. ನನಗೆ ದಕ್ಕುವುದು ಮೊದಲ ಹಂತದಲ್ಲಿ ನನ್ನ ಬೊಗಸೆಗೆ ನಿಲುಕುವಷ್ಟು ಮಾತ್ರ.. ಜಿಎಸ್ ಶಿವರುದ್ರಪ್ಪನವರ ಈ ಹಾಡು  ಮಣ್ಣಿನ ಬಗ್ಗೆ ಇಬ್ಬರಿಗಿರುವ ಇಬ್ಬಗೆಯ ದೃಷ್ಟಿಕೋನ. ನನಗೆ ತುಂಬಾ ಪರಿಚಿತ ಹಿರಿಯರೊಬ್ಬರ ಅಳಿಯ ಸರ್ಕಾರದ ಮುಖ್ಯ ಇಲಾಖೆಯಲ್ಲಿ  ಗುಮಾಸ್ತ. ಚೆನ್ನಾಗಿ ಸಂಪಾದಿಸುತ್ತಿದ್ದ (ಲಂಚ ಎಂದು ಬೇರೆ ಹೇಳಬೇಕೆ?) ವ್ಯಕ್ತಿ. ತಮ್ಮ ಅಳಿಯನಿಗೆ ಸಂಪಾದನೆ ಚೆನ್ನಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವರು. ಮುಂದೊಂದು ದಿನ ತನ್ನ ಮಗ ಅದೇ  ಇಲಾಖೆಗೆ ತನ್ನ ಕೆಲಸ ಆಗಲು ದೊಡ್ಡ ಮೊತ್ತದ ಲ...

ಅಂಚೆ ಪೆಟ್ಟಿಗೆಯ ಸುತ್ತ...

Image
  ಕೆಲ ದಿನಗಳ ಹಿಂದೆ ವಾಟ್ಸಪ್ ನಲ್ಲಿ " ಅಂಚೆ ಪೆಟ್ಟಿಗೆಗಳನ್ನು  ಸೆಪ್ಟೆಂಬರ್ 2025ರ   ಒಂದನೇ ದಿನಾಂಕದಿಂದ ತೆಗೆದು ಹಾಕಲಿದ್ದಾರೆ" ಎಂಬ ಸಂದೇಶ ಹರಿದಾಡಿತು. ಅದನ್ನು ಓದಿದಾಗ ನನಗೆ ತಿಳಿಯದಂತೆ ಸಲ್ಪ ಕಸಿವಿಸಿ ಆಯಿತು. ಸೆಪ್ಟಂಬರ್ ಒಂದನೆಯ ತಾರೀಕು ನನ್ನ ಜೀವನದ ಅತ್ಯಂತ ಪ್ರಮುಖ ದಿನ... ಅಂದು ನಾನು ಮೊದಲ ಕೆಲಸಕ್ಕೆ ಸೇರಿದ ದಿನ. ಅದೇ ಸೆಪ್ಟೆಂಬರ್ 1 ಪೋಸ್ಟ್ ಬಾಕ್ಸ್ ಇರುವುದಿಲ್ಲ ಎನ್ನುವ ವಿಷಯ  ಒಪ್ಪಲು ನನ್ನ ಮನಸ್ಸು ನಿರಾಕರಿಸಿತು. ಹಾಗಾಗಿ, ಒಂದಷ್ಟು ಗೂಗಲ್ ನಲ್ಲಿ ಹುಡುಕಾಟದ ನಂತರ, ಆ ಸುದ್ದಿ ಸತ್ಯವಲ್ಲ ಎಂದು ತಿಳಿದು ಸಹಜವಾಗಿ ಸಂತೋಷವಾಯಿತು. ಅಂಚೆ ಮತ್ತು ತಂತಿ ಇಲಾಖೆಯೊಂದಿಗೆ ನನ್ನ ಒಡನಾಟ ಬೆಳೆದದ್ದು ಐದನೇ ತರಗತಿಯಲ್ಲಿ ಓದಲು ವಿದ್ಯಾನಗರದ ಸರ್ಕಾರಿ ಶಾಲೆಗೆ ಹೋಗಲು ಪ್ರಾರಂಭ ಮಾಡಿದಾಗ. ವಿದ್ಯಾನಗರದಲ್ಲಿ  ಮಾತ್ರ ಅಂಚೆ ಕಛೇರಿಯು  ಇದ್ದ ಕಾರಣದಿಂದ, ನನ್ನೂರು ದೊಡ್ಡಜಾಲಕ್ಕೆ ಬರುವ ಎಲ್ಲಾ ಪತ್ರಗಳನ್ನು ತಂದು ತಲುಪಿಸುವ ಜವಾಬ್ದಾರಿ ನಮಗೆ ಕೊಡಲಾಗಿತ್ತು. ಓದಲು ಬರದ ಕೆಲವರಿಗೆ ಬಂದ ಪತ್ರಗಳನ್ನು ಓದಿ ಹೇಳುವ ಜವಾಬ್ದಾರಿಯೂ ನಮ್ಮದಾಗಿತ್ತು. ಇದಲ್ಲದೆ ನಮ್ಮ ಊರಿನವರು ಬರೆದ ಕಾಗದಗಳನ್ನು ಅಂಚೆ ಪೆಟ್ಟಿಗೆಗೆ ಹಾಕುವುದು, ಊರಲ್ಲಿದ್ದ ಪಂಪ್ಸೆಟ್ಟುಗಳ ಎಲೆಕ್ಟ್ರಿಕ್ ಬಿಲ್ಲುಗಳನ್ನು ಮನಿ ಆರ್ಡರ್ ಮಾಡುವುದು ನಮ್ಮ ಕೆಲಸವಾಗಿತ್ತು. ಇದಕ್ಕೆಲ್ಲಾ ಯಾವುದೇ ರೀತಿಯ ಸರ್ಕಾರಿ ಆದೇಶಗಳ...

ಗಣೇಶ- ಗೀತೆ- ಗುಣಗಾನ

Image
  ಗಣೇಶನ ಹಬ್ಬ ಮನೆಯಲ್ಲಿ ಮುಗಿದಿದೆ, ಆದರೆ ಮನೆಯ ಸುತ್ತು ಮುತ್ತಿನ ರಸ್ತೆಯಲ್ಲಿ ಸಡಗರ ಮುಂದುವರೆದಿದೆ. ಮಕ್ಕಳ ಉತ್ಸಾಹಕ್ಕೆ ಮೇರೆ ಇಲ್ಲ, ಗಣೇಶನಿಗೆ ಜೈಕಾರ, ಹಾಡು, ಕುಣಿತ ಜೋರಿದೆ. ಗಣೇಶ ಬಂದ ಕಾಯಿ ಕಡಬು ತಿಂದ, ಹೊಟ್ಟೆ ಮೇಲೆ ಗಂಧ,  ಚಿಕ್ಕೆರೇಲ್ ಬಿದ್ದ ದೊಡ್ ಕೆರೇಲಿ ಎದ್ದ ..ಇದು ನಾವು ಚಿಕ್ಕಂದಿನಲ್ಲಿ ಹೇಳುತ್ತಿದ್ದ ಗಣೇಶನ  ಮೊದಲ  ಹಾಡು. ನಂತರ ಕೋಲಾಟಕ್ಕಾಗಿ ಕಲಿತದ್ದು ಶರಣು ಶರಣುವಯ್ಯ ಗಣನಾಯಕ ನಮ್ಮ ಕರುಣದಿಂದಲಿ ಕಾಯೋ ಗಣನಾಯಕ. ಕೋಲಾಟ ಆಡುತ್ತಾ  ಹಾಡುವುದು ಕಷ್ಟ ಆದಕಾರಣ, ನಾವು ಗಣನಾಯಕ ಭಾಗ ಮಾತ್ರ ಹೇಳುತ್ತಿದ್ದೆವು, ಮೂಲ ಹಾಡು ಬೇರೆ ಯಾರಾದರೂ ಹಾಡುತ್ತಿದ್ದರು. ಬೇರೆ ಬೇರೆ ವೇಗದಲ್ಲಿ ಕುಣಿಯುತ್ತ ಹಾಡುವಾಗ ನಮ್ಮ ಉತ್ಸಾಹ ಮುಗಿಲು ಮುಟ್ಟುತ್ತಿತ್ತು. ಪ್ರತಿದಿನ ಸಂಜೆ, ದೀಪ ಹೊತ್ತಿಸಿದ ತಕ್ಷಣ,  ಶುಕ್ಲಾಂಭರದರಂ ವಿಷ್ಣುಂ ಶಶಿವರ್ಣಂ... ಗಣೇಶ ಸ್ತುತಿಯೊಂದಿಗೆ ಪ್ರಾರಂಭ ಮಾಡಿ  ಗುರು ಬ್ರಹ್ಮ ಗುರು ವಿಷ್ಣು.. ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ... ಶ್ಲೋಕಗಳನ್ನು ಹೇಳಿ ಓದುತ್ತಿದ್ದದ್ದು. ಗಣೇಶನಿಗೆ ಮೊದಲ ಪೂಜೆ ಎಂದು ತಲೆಯಲ್ಲಿ ಅಚ್ಚಾಗಿತ್ತು. ಅಗಜಾನನ ಪದ್ಮಾರ್ಕಮ್, ಗಜಾನನ ಮಹರ್ನಿಶಂ.. ಸ್ತೋತ್ರದ ಅನೇಕದಂತಂ ಹಾಗೂ ಏಕದಂತಂ ಬಗ್ಗೆ ನನಗೆ ಒಂದಷ್ಟು ಅನುಮಾನವಿತ್ತು. ಏಕದಂತಂ ಗಣೇಶನ ಒಂದು ಹೆಸರು ಅನೇಕದಂತಮ್ ಏನು? ರಾಷ್ಟ್ರೀಯ ವಿದ್ಯಾಲಯ ಹೈಸ್ಕೂಲಿನ ಸಂಸ್ಕ...