Posts

Showing posts from July, 2025

ಹರಕೆ - ಅರಿಕೆಯೋ, ಆಮಿಷವೋ?

Image
  ಬಸವನಗುಡಿಯ ದೊಡ್ಡ ಬಸವಣ್ಣನ ಹಾಗೂ ದೊಡ್ಡ ಗಣೇಶನ ದೇವಸ್ಥಾನ ಎಲ್ಲ ಯಾತ್ರಿಗಳು ಬಂದು ನೋಡುವ ತಾಣ. ಅವುಗಳಿರುವ ಗುಡ್ಡ, ಕಹಳೆ ಬಂಡೆ, ಒಂದಷ್ಟು ಹಸಿರು, ಜೊತೆಗೆ ನಾಗರಿಕತೆಯ ಕುರುಹಾಗಿ ನೀರಿನ ಟ್ಯಾಂಕ್, ಮಂಕುತಿಮ್ಮನ ಕಗ್ಗದ ಕರ್ತೃ ಡಿವಿಜಿ ಯವರ ಪುತ್ಥಳಿ... ಎಲ್ಲವೂ ಅಂದವನ್ನು ಹೆಚ್ಚಿಸಿದೆ. ದೈನಂದಿನ ಓಡಾಟದಲ್ಲಿ,  ಈ ಜಾಗದ ಪಕ್ಕದಲ್ಲಿ ಬಹಳ ಸಲ ಓಡಾಡಿದರೂ, ಒಳ ಹೋಗಿ ಬರುವುದು ಕಡಿಮೆಯೇ.  ಹೋದ ಸೋಮವಾರ ದೊಡ್ಡ ಗಣೇಶನಿಗೆ ಬೆಣ್ಣೆ ಅಲಂಕಾರ ಹಾಗೂ ಪೂಜೆ. ಇದನ್ನು ಬಹಳ ಹತ್ತಿರದಿಂದ ನೋಡುವ ಅವಕಾಶ ನನಗಾಯಿತು. ಅದಕ್ಕೆ ಕಾರಣ ನನ್ನ ಹೆಂಡತಿ ವಿಜಯ ಹೊತ್ತಿದ್ದ ಹರಕೆ. ಹರಕೆಗೆ 12 ವರ್ಷ ಎನ್ನುವ ಮಾತಿದೆ... ಆದರೆ ಈ ಹರಕೆ ಸಲ್ಲಿಸಲು ಸುಮಾರು ಮೂರು 12 ವರ್ಷಗಳು ಕಳೆದದ್ದು ಸತ್ಯ. ನನ್ನ ಮಗಳು ಚಿಕ್ಕವಳಿದ್ದಾಗ ಹರಸಿಕೊಂಡಿದ್ದಂತೆ, ಈಗ ಕಾಲ ಕೂಡಿ ಬಂದಿದ್ದು. ಅದರ ಫಲವೇ ಮೊದಲ ಬಾರಿ ದೊಡ್ಡ ಗಣೇಶನ ಮುಂದೆ ಕೂತಿದ್ದು, ಪೂಜೆ ಮಂಗಳಾರತಿಯಲ್ಲಿ ಭಾಗಿಯಾಗಿದ್ದು. ಸಾಮಾನ್ಯವಾಗಿ ಅಲ್ಲಿಗೆ ಹೋದಾಗ, ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಿ, ಬರುವುದು ವಾಡಿಕೆ. ಬೆಣ್ಣೆಯ ಅಲಂಕಾರ ನಿಜಕ್ಕೂ ಒಂದು ಕಲೆ. ಅಷ್ಟು ದೊಡ್ಡ ವಿಗ್ರಹಕ್ಕೆ ಬೆಣ್ಣೆಯನ್ನು ಹಚ್ಚಿ, ಬಣ್ಣದ ಕಾಗದಗಳಿಂದ ಅಲಂಕರಿಸಿ, ವಿಗ್ರಹಕ್ಕೆ ಸುಂದರ ರೂಪವನ್ನು ಕೊಡುವುದು. ಜೊತೆಗೆ ವಿದ್ಯುತ್ ದೀಪದ ಬೆಳಕಿನ ಅಲಂಕಾರ. ಎಂಥವರ ಮನಸ್ಸನ್ನೂ ಸೆಳೆಯುವ ದೃಶ್ಯ. ಇನ್ನು ಭಕ್ತ ಸಮುದ...

ಕನಕಾಭಿಷೇಕ - ಸಂಭ್ರಮ

Image
  ಮೊನ್ನೆ ಗುರುವಾರ, ಒಂದು ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಹ್ವಾನವಿತ್ತು. ಅಪರೂಪದ ಕಾರ್ಯಕ್ರಮವಾದ್ದರಿಂದ, ನರಸಿಂಹರಾಜ ಕಾಲೋನಿಯ ರಾಮದೇವರ ದೇವಸ್ಥಾನದ ಕಡೆಗೆ ಹೊರಟೆ.   ಅಲ್ಲಿ ಕಂಡದ್ದು ಸಡಗರ, ಸಂಭ್ರಮದ ವಾತಾವರಣ. ಒಂದು ಕಡೆ ಕಳಸಗಳ ಪೂಜೆ, ಇನ್ನೊಂದೆಡೆ ಹೋಮ ಹವನಗಳು, ಎಲ್ಲದರ ಮಧ್ಯೆ ಕಂಡದ್ದು  ಕಾರ್ಯಕ್ರಮದ ಕೇಂದ್ರಬಿಂದು  ಆ ಹಿರಿಯ ದಂಪತಿಗಳು( ಶ್ರೀಮತಿ ನಾಗಮ್ಮ ಹಾಗೂ ಶ್ರೀ ನಾಗರಾಜನ್)...  ಪಕ್ಕದಲ್ಲಿ ಚಿಕ್ಕಮ್ಮನ ಕಂಕುಳಲ್ಲಿ ಇದ್ದ ಈ ಕಾರ್ಯಕ್ರಮದ ಕಾರಣ ಪುರುಷ ನಾಲ್ಕನೇ ತಲೆಮಾರಿನ ಮಗು, ಶ್ರೀಪ್ರಮುಖ. ಅಂದು ಆ ಹಿರಿಯ ದಂಪತಿಗಳಿಗೆ ' ಕನಕಾಭಿಷೇಕ' ಕಾರ್ಯಕ್ರಮ.  ಕನಕಾಭಿಷೇಕ  ನಡೆಯುವುದು ಒಂದು ಅಪರೂಪದ ಸಂದರ್ಭದಲ್ಲಿ. ಅದು ನಾಲ್ಕು ತಲೆಮಾರಿನಲ್ಲೂ ಮೊದಲ ಮಗು ಗಂಡಾದಾಗ... ಇಲ್ಲಿನ ಉದಾಹರಣೆ ತೆಗೆದುಕೊಂಡರೆ- ನಾಗಮ್ಮ ಹಾಗೂ ನಾಗರಾಜ್ ದಂಪತಿಯ ಮೊದಲನೆಯ ಮಗ ರಘುರಾಮ್.. ರಘುರಾಮ್ ನಾಗಲಕ್ಷ್ಮಿ ದಂಪತಿಯ ಮೊದಲ ಮಗ ಶ್ರೀಹರ್ಷ.. ಶ್ರೀಹರ್ಷ ಹಾಗೂ ಯಶಸ್ವಿನಿಯ ಮೊದಲ ಮಗ ಶ್ರೀ ಪ್ರಮುಖ... ಹಾಗಾಗಿ ಹಿರಿಯ ದಂಪತಿಗಳಿಗೆ ಕನಕಾಭಿಷೇಕದ ಸಂಭ್ರಮ. ಯಶಸ್ವಿನಿ ನನ್ನಕ್ಕನ ಮಗನ ಮಗಳು. ಕನಕಾಭಿಷೇಕ ನಿಜ ಅರ್ಥದಲ್ಲಿ ಚಿನ್ನದ (ನಾಣ್ಯಗಳ) ಅಭಿಷೇಕ. ಹಿಂದೆ ಯಾರು ಮಾಡಿದ್ದರೋ ತಿಳಿಯದು. ವ್ಯಾವಹಾರಿಕವಾಗಿ ಯೋಚನೆ ಮಾಡಿದಾಗ ಚಿನ್ನದ ನಾಣ್ಯಗಳ ಅಭಿಷೇಕ ಸಾಧುವಲ್ಲ. ಸುರಿದ ಮೇಲೆ ಮತ್ತೆ ...

ಪ್ರತಿಭೆ - ಪ್ರದರ್ಶನ - ಪುರಸ್ಕಾರ

Image
ಮೊನ್ನೆ ಭಾನುವಾರ, ತಿಮ್ಮೇಶ ಪ್ರಭು ಉದ್ಯಾನವನದಲ್ಲಿ, ಸ್ನೇಹ ರಂಗದ ವತಿಯಿಂದ ಈ ವರ್ಷದ ಪ್ರತಿಭಾ ಪುರಸ್ಕಾರವನ್ನು ಏರ್ಪಡಿಸಲಾಗಿತ್ತು. ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.  ಬೆಳಗಿನ ಸುಂದರ ವಾತಾವರಣದಲ್ಲಿ ಮಕ್ಕಳ ಉತ್ಸಾಹ, ಪೋಷಕರ ಮುಖದಲ್ಲಿದ್ದ ಹೆಮ್ಮೆ, ಸ್ನೇಹ ರಂಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿನ ಸಲುವಾಗಿ ಉತ್ಸಾಹದಿಂದ ಮಾಡುತ್ತಿದ್ದ ಕೆಲಸಗಳು  ಅಲ್ಲೊಂದು ಸಂಭ್ರಮದ, ಸಡಗರದ ದೃಶ್ಯಗಳಾಗಿ ಕಾಣುತ್ತಿದ್ದವು. ಸುಂಕೇನಹಳ್ಳಿ ಸರ್ಕಾರಿ ಶಾಲೆಯ 34  SSLC ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿದ್ದರು. ಸುಂಕೇನಹಳ್ಳಿ ಶಾಲೆ ಯೊಂದಿಗೆ ನನ್ನದು ಒಂದಷ್ಟು ಒಡನಾಟವಿದೆ, ಅಭಿಮಾನವಿದೆ.      ಪ್ರತಿಭಾ ಪುರಸ್ಕಾರಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನು ಗಮನಿಸಿದಾಗ, ಆ ಕಾರ್ಯಕ್ರಮಗಳು ಒಂದು ಸೀಮಿತ ಸಮುದಾಯದ ಮಕ್ಕಳನ್ನು ಮಾತ್ರ ಒಳಗೊಂಡಿರುತ್ತದೆ. ಅದು ಒಂದು ಜಾತಿ, ಪಂಗಡದ ಮಕ್ಕಳಾಗಿರಬಹುದು ಅಥವಾ ಒಂದು ಸಂಸ್ಥೆಯ ಸದಸ್ಯರ ಮಕ್ಕಳಾಗಿರಬಹುದು.   ಆದರೆ ಸ್ನೇಹ ರಂಗದ ವೈಶಿಷ್ಟ್ಯ ... ಹತ್ತಿರದಲ್ಲೇ ಇರುವ ಸುಂಕೇನಹಳ್ಳಿ ಸರ್ಕಾರಿ ಶಾಲೆ, ಹಾಗೂ ವಿವೇಕಾನಂದ ಶಾಲೆಯ ಮಕ್ಕಳಿಗೆ ಆದ್ಯತೆ .( ಈ ಮಕ್ಕಳ ಪೋಷಕರು ಸಾಮಾನ್ಯವಾಗಿ ಆರ್ಥಿಕವಾಗಿ ಕೆಳವರ್ಗದವರಿದ್ದು, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಶಕ್ತಿಮೀರಿ ಪ್ರಯತ್ನ ಮಾಡುತ್ತಿರುವವ...

ಯೋಗ - ಯೋಗಾ ಯೋಗ

Image
ಹೋದ ಶನಿವಾರ ಅಶಕ್ತ ಪೋಷಕ ಸಭಾ ನಿವಾಸಿಗಳಿಂದ ಪ್ರತಿವರ್ಷದಂತೆ ಯೋಗ ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಕಾರಣಗಳಿಂದ ಮನೆಯವರಿಂದ ದೂರವಾಗಿ ವೃದ್ಧಾಶ್ರಮದಲ್ಲಿ ಇರಬೇಕಾಗಿ ಬಂದಿರುವ ಮನಸ್ಥಿತಿಯ ಹಾಗೂ ವಯೋ ಸಹಜ ಇತಿಮಿತಿಗಳನ್ನು ಹೊಂದಿರುವ ವ್ಯಕ್ತಿಗಳು ಯೋಗ ಪ್ರದರ್ಶನ, ಹಾಡು, ನೃತ್ಯ, ಏಕ ಪಾತ್ರಾಭಿನಯ, ಕಿರು ನಾಟಕ ಹೀಗೆ ವಿವಿಧ ಕಲೆಗಳನ್ನು ಪ್ರದರ್ಶಿಸಲು ತೋರಿಸಿದ  ಉತ್ಸಾಹವನ್ನು ನೋಡಲು, ಅವರೊಡನೆ ಒಡನಾಡಲು ಬಲು ಛಂದ. ಇದು ಸಾಧ್ಯವಾಗಲು ನಮ್ಮ   ತಂಡದ ಎಲ್ಲ ಸದಸ್ಯರ ಅವಿರತ ಶ್ರಮ ಬಹು ಮುಖ್ಯವಾದದ್ದು. ಕಾರ್ಯಕ್ರಮದ ನಂತರ ಅವರು ಹಂಚಿಕೊಂಡ ಅನಿಸಿಕೆಗಳಲ್ಲಿ ತೃಪ್ತಿ ಕಾಣುತ್ತಿತ್ತು. ಇದು ನಮ್ಮ ಯೋಗಾಯೋಗವೇ ಸರಿ. ಭಗವದ್ಗೀತೆಯಲ್ಲಿ ಕೃಷ್ಣನು ಹೇಳಿದ ಕರ್ಮ ಯೋಗ- ಪ್ರತಿಫಲಾಪೇಕ್ಷೆ ಇಲ್ಲದ ನಿಸ್ವಾರ್ಥ ಕೆಲಸವನ್ನು ಸ್ವಲ್ಪ ಭಾಗವಾದರೂ ಪಾಲಿಸಿದ ತೃಪ್ತಿ ನಮ್ಮೆಲ್ಲರದು. ಯೋಗಾಯೋಗವನ್ನು ಆಡು ಮಾತಿನಲ್ಲಿ ಯೋಗ ಎಂದೇ ಉಪಯೋಗಿಸುತ್ತಾರೆ. ಯೋಗ ಎಂಬುದು ಜನಮಾನಸದ ದೃಷ್ಟಿಯಲ್ಲಿ ಯೋಗಾಸನದ ವಿವಿಧ ಭಂಗಿಗಳನ್ನು ಮಾಡುವುದು. ಯೋಗ ಪದ ರೂಪುಗೊಂಡಿರುವುದು... ಯುಜ್ಯತೆ ಇತಿ ಯೋಗಃ... ಅಂದರೆ ಒಂದುಗೂಡಿಸುವುದು. ನಿಜ ಅರ್ಥದಲ್ಲಿ ದೇಹ ಮತ್ತು ಮನಸ್ಸನ್ನು ಒಂದುಗೂಡಿಸುವುದು... ಅದು ಬೇರೆಯೇ ಸ್ತರ. ಯೋಗಾಯೋಗದ ಪ್ರಯೋಗವು ಅದೃಷ್ಟ ಕೂಡಿ ಬರುವುದು, ದೈವ ಕೃಪೆ, ದೈವಬಲ, ದೈವ ಯೋಗ ಎಂಬ ಭಾವದಿಂದ, ಎಲ್ಲಾ ಒಳ್ಳೆಯ ಪ್...