ರಾವಣ - ಮಹಾ ಪಾಪ- ಮೋಸ

ಕೆಲವು ದಿನಗಳ ಹಿಂದೆ... ಸನಾತನ ಕಥನ.. ಎನ್ನುವ ಯೂಟ್ಯೂಬ್ ಚಾನಲ್ ನ ಒಂದು ಭಾಗ ನನ್ನ ವಾಟ್ಸಪ್ ಗೆ ಬಂದಿತ್ತು... ಅದರಲ್ಲಿ ಪಾಪದ ಬಗ್ಗೆ ವಿಶ್ಲೇಷಣೆಯಿತ್ತು. ಪಾಪ, ಅತಿಪಾಪ ಹಾಗೂ ಮಹಾ ಪಾಪ ಎಂಬ ಮೂರು ಬಗೆಯ ಪಾಪಗಳು. ಪಾಪ... ತಿಳಿದೋ ತಿಳಿಯದೆಯೋ ತಪ್ಪುಗಳನ್ನು ಮಾಡಿ ಅದಕ್ಕೆ ಪಶ್ಚಾತಾಪ ಪಡುವುದು. ಇದು ಕ್ಷಮಾರ್ಹ ಪಾಪ. ಅತಿಪಾಪ ... ಎಲ್ಲ ಗೊತ್ತಿದ್ದು.. ಹಿಂಸೆ, ಕೊಲೆ ಸುಲಿಗೆ ಅಪಹರಣ ಹೀಗೆ ಪರಹಿಂಸೆ ಮಾಡುವುದು... ಜೊತೆಗೆ ಯಾವುದೇ ಪಶ್ಚಾತಾಪ ಇಲ್ಲ. ಈ ಪಾಪಕ್ಕೆ ತಕ್ಕ ಶಿಕ್ಷೆ ಅನುಭವಿಸಿದ ನಂತರ ಕ್ಷಮೆಗೆ ಅರ್ಹತೆ. ಮಹಾ ಪಾಪ ... ನಂಬಿಸಿ ಮೋಸ ಮಾಡುವುದು. ಮಹಾ ಪಾಪಕ್ಕೆ ಕ್ಷಮೆಯೇ ಇಲ್ಲ. ರಾವಣ ಮಹಾ ಪಾಪ ಮಾಡಿ ಮೋಕ್ಷಕ್ಕೆ ಅರ್ಹತೆಯನ್ನು ಕಳೆದುಕೊಂಡ ಎಂಬುದು ಆ ವಿಡಿಯೋದ ಸಾರಾಂಶವಾಗಿತ್ತು. ಮೋಸ ನನ್ನ ದೃಷ್ಟಿಯಲ್ಲಿ ನಂಬಿದವರಿಗೆ ಮಾತ್ರ ಮಾಡಲು ಸಾಧ್ಯ.. ನಂಬಿಸುವುದು ಒಂದು ಕಲೆ. ನಮ್ಮ ಸುತ್ತ ತಿರುಗಿ ನೋಡಿದರೆ... ಎಲ್ಲೆಲ್ಲಿಯೂ ಮೋಸವೇ ಕಾಣಿಸುತ್ತದೆ. ವ್ಯಾಪಾರಿಗಳ ತೆರಿಗೆ ವಂಚನೆ ಚೀಟಿ ವ್ಯವಹಾರದಲ್ಲಿ ಮೋಸ. ಚೀಟಿ ವ್ಯವಹಾರದಲ್ಲಿ ಹಣ ಹೂಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಕೈ ಸುಟ್ಟು ಕೊಂಡವರು ಇದ್ದಾರೆ. ಬ್ಯಾಂಕ್ ನಲ್ಲಿ ಸಾಲ ಪಡೆದು ಹಿಂತಿರುಗಿಸದ ಮೋಸ. ಸರ್ಕಾರದ ಕೆಲಸ ಮಾಡಿಕೊಡಲು ಲಂಚ ಕೇಳುವುದು... ಇದಕ್ಕೊಂದು ನೈಜ ಘಟನೆ ಸಾಕ್ಷಿ ..ಭಾವಿ ತೋಡಲು ಬ್ಯಾಂಕ್ ಸ...