ತಪ್ಪು- ಶಿಕ್ಷೆ- ಪಶ್ಚಾತ್ತಾಪ

ಮೊನ್ನೆ ಒಂದು ದಿನ... ಯೂಟ್ಯೂಬ್ ನಲ್ಲಿ ನನಗೆ ತುಂಬಾ ಪ್ರಿಯವಾದ ಮುಖೇಶ್ ಹಾಡಿದ ಗೋಳು ಗೀತೆಗಳ(sad songs) ಹುಡುಕಾಟದಲ್ಲಿದ್ದಾಗ... ಧುತ್ತೆಂದು ಮುಂದೆ ಬಂದಿದ್ದು..ZEE TVಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಒಂದು ಸಂಚಿಕೆ... ಅದು ಚಿತ್ರನಟ ಅನಂತನಾಗ್ ಅವರದ್ದಾದ್ದರಿಂದ... ಕುತೂಹಲ ಮೂಡಿ ಪೂರ್ಣ ಸಂಚಿಕೆಯನ್ನು ಸುಮಾರು ಒಂದು ಗಂಟೆಗೂ ಮೀರಿ ತುಂಬಾ ಇಷ್ಟದಿಂದ ನೋಡಿದೆ. ಅದು #ಅನಂತನಾಗ್ ಅವರ " ಸಿಹಿ ಕಹಿ ನೆನಪುಗಳು" ಆಗಿತ್ತು ಎನ್ನುವ ಅನಿಸಿಕೆ( ಇದು ಒಂದು ತರಹ ತಿಕ್ಕಲುತನ ಎನ್ನಲೇ?) ನನ್ನದಾಯಿತು. #Ananthanag ನಾನು ಮೆಚ್ಚಿದ ನಟರಲ್ಲಿ ಒಬ್ಬರು. ನನ್ನ ದೃಷ್ಟಿಯಲ್ಲಿ ಕನ್ನಡ ಚಿತ್ರರಂಗದ #versatile ನಟರು ಎಂದರೆ ಬಾಲಕೃಷ್ಣ ಹಾಗೂ #ಅನಂತ್ ನಾಗ್ ಅವರು. ಈ ನನ್ನ ಅಭಿಪ್ರಾಯವನ್ನು ಒಪ್ಪದೇ ಇರುವ, ವಿರೋಧಿಸುವ ಒಂದು ದೊಡ್ಡ ದಂಡೇ ನನ್ನ ಅತ್ತೆಯ ಮನೆ ಕಡೆ ಇದೆ... ನನ್ನ ಹೆಂಡತಿ ವಿಜಯ ಆ ಗುಂಪಿನ ಮಂಚೂಣಿಯಲ್ಲಿದ್ದಾಳೆ.. ಅವರಿಗೆಲ್ಲ ಅಣ್ಣಾವ್ರು (ರಾಜಕುಮಾರ್) ಅಚ್ಚು ಮೆಚ್ಚು...ನನಗೂ #ರಾಜಕುಮಾರ್ ಎಂದರೆ ಇಷ್ಟವೇ... ವಿಷಯ ಪಲ್ಲಟವಾಯಿತು... ಇರಲಿ ಅದು ಒಂದು ಕಡೆ. #ಅನಂತ್ ನಾಗ್ ಅವರು ನಿರರ್ಗಳವಾಗಿ ಹಾಡಿದ ಒಂದು ನೀಳ ಗೀತೆ... ಪ್ರಾರ್ಥನೆಯ ರೂಪದಲ್ಲಿ ಚಿಕ್ಕಂದಿನಲ್ಲಿ ಕಲಿತದ್ದು... ವಿಶೇಷವಾಗಿತ್ತು, ಜೊತೆಯಲ್ಲೇ ಹೇಳಿದ ಮಾತು " ಯಾವ ಚಿತ್ರದ ಮಾತುಗಳೂ ನೆನಪಿಲ್ಲ" ... ಚಿಕ್...