ಶಹಾಬಾದ್ ..ಬಿಟ್ಟರೂ ಬಿಡದ ನಂಟು

ನಾನು ಶಹಾಬಾದ್ ಬಿಟ್ಟು ಈ ಡಿಸೆಂಬರ್ ಗೆ 50 ವರ್ಷಗಳು ಮುಗಿದವು.... ಆದರೆ ಇಂದಿಗೂ ಶಹಾಬಾದ್ ಹೆಸರು ಕೇಳಿದರೆ ಏನೋ ಒಂದು ರೀತಿಯ ಪುಳಕ ಹಾಗೂ ಅಭಿಮಾನ. ಏನು ವಿಶೇಷವೋ ಆ ಶಹಾಬಾದಿನ ಮಣ್ಣಲ್ಲಿ... ಅದರ ಸೆಳೆತ ಸ್ವಲ್ಪವೂ ಕಡಿಮೆಯಾಗಿಲ್ಲ... ನಂಟು ಬಲು ಅಂಟು.... ಬಿಸಿಲೂ ಉಂಟು... ಸಿಮೆಂಟಿನ ಧೂಳೂ ಉಂಟು... ಬಿರು ಬೇಸಿಗೆಯಲ್ಲಿ... ಮಧ್ಯಾಹ್ನ ಆಫೀಸಿಗೆ ಹೋಗುವಾಗ, ತಲೆಗೆ ಹ್ಯಾಟ್ ಕಡ್ಡಾಯ... ಆಫೀಸ್ ಒಳಗೆ ಹೋದ ತಕ್ಷಣ ಫ್ಯಾನ್ ಕೆಳಗೆ ಒಂದೆರಡು ನಿಮಿಷ ವಿಶ್ರಾಂತಿ ಅವಶ್ಯಕ. ನಮ್ಮ ಆಫೀಸ್ ಸಮಯ ಬೆಳಿಗ್ಗೆ 8 ರಿಂದ 12 ಮಧ್ಯಾಹ್ನ 2 ರಿಂದ 5.... ಹಾಗಾಗಿ ಮಧ್ಯಾಹ್ನ ಊಟ ಆದ ನಂತರ ಒಂದು ನಿದ್ದೆ ಬಲು ಸಹಜವಾಗಿ ಬರುತ್ತಿತ್ತು...12.20 ಕ್ಕೆ ಹಾಸಿಗೆಯ ಮೇಲೆ 2.05 ಕ್ಕೆ ಮತ್ತೆ ಆಫೀಸ್. ಶಹಾಬಾದ್ ನಂಟು ಬೆಳೆಯಲು ಕಾರಣ ನನ್ನ ಸ್ನೇಹಿತ ಎಚ್ ಪಿ ರಂಗನಾಥ್... ಅವನಾಗಲೇ ಶಹಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದ.... ಅವರ ಸಂಬಂಧಿ.. ಎಂ ಎಸ್ ವೆಂಕಟರಾಮು ಅವರ ಪರಿಚಯದಿಂದ. ಇಂಟರ್ವ್ಯೂನಲ್ಲಿ ಒಂದು ಪ್ರಶ್ನೆ " why do you want to come to this desert like place" ಕೇಳಿದವರು ಯಾರೋ ಗೊತ್ತಿಲ್ಲ.... ಅವರ ಮನಸ್ಸಿನ ಭಾವನೆಯನ್ನು ಹೊರ ಹಾಕಿದರಾ? ಉತ್ತರ ಏನು ಹೇಳಿದೆನೋ ಗೊತ್ತಿಲ್ಲ.... ಆದರೆ ಕೆಲಸ ಅಂತೂ ಸಿಕ್ಕಿತ್ತು.... ಹಾಗಾಗಿ ನಾನು ಶಹಾಬಾದ್ ವಾಸಿಯಾದೆ. ಇರಲು ರಂಗನಾಥನ ಮನೆ... ಊಟಕ್ಕೆ ಕ್ಯಾಂಟೀನ್... ಜೊತೆಗೆ ಒಂದು ...