ಅನ್ನಂ ನ ನಿಂದ್ಯಾತ್..ತದ್ ವ್ರತಂ

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು ಹೇಳಿದ್ದಾರೆ ದಾಸ ವರೇಣ್ಯ ಪುರಂದರ ದಾಸರು. ಹೊಟ್ಟೆಗೆ ಮೊದಲ ಆದ್ಯತೆ.. ಹೊಟ್ಟೆ ತುಂಬಲು ಬೇಕು ಅನ್ನ / ಆಹಾರ. ಅಗುಳು, ಅಗುಳಿನ ಮೇಲು ತಿನ್ನುವವನ ಹೆಸರು ಬರೆದಿದೆ ಎನ್ನುವುದು ಒಂದು ಜಾಣ್ನುಡಿ. ಅನ್ನಂ ಪರಬ್ರಹ್ಮ ಎಂದು ಹೇಳಿದ್ದಾರೆ ಹಿರಿಯರು.. ಅನ್ನ ನಮ್ಮ ಜೀವನಕ್ಕೆ ಬೇಕಾದ ಶಕ್ತಿಯನ್ನು ಕೊಡುವ ಮೂಲವಸ್ತು ಹಾಗಾಗಿ ಅದನ್ನು ದೇವರಿಗೆ ಹೋಲಿಸಿದ್ದಾರೆ. ಜೊತೆಗೆ ಅನ್ನಂ ನ ನಿಂದ್ಯಾತ್..ತದ್ ವ್ರತಂ... ಅಂತಲೂ ಹೇಳಿದ್ದಾರೆ... ಅಂದರೆ ಅನ್ನಕ್ಕೆ ಅಗೌರವ ತೋರಿಸಬೇಡ, ಹಾಳು ಮಾಡಬೇಡ... ಅದೊಂದು ವ್ರತ. ನಾನು ಚಿಕ್ಕವನಿದ್ದಾಗ ಊಟ ಮಾಡುವಾಗ ತಟ್ಟೆಯಲ್ಲಿ ಅನ್ನವನ್ನು/ ತಿನ್ನುವ ಪದಾರ್ಥವನ್ನು ಬಿಟ್ಟರೆ ಅದನ್ನು ನನ್ನ ತಲೆಗೆ ಕಟ್ಟುತ್ತೇನೆ ಎಂದು ನಮ್ಮಪ್ಪ ಹೇಳುತ್ತಿದ್ದರು ... ಹಾಗಾಗಿ ನನಗೆ ಆಹಾರ ಪದಾರ್ಥವನ್ನು ಚೆಲ್ಲಬಾರದು ಎಂಬ ಮಾತು ಮನಸ್ಸಿನಲ್ಲಿ ಭದ್ರವಾಗಿ ಮೂಡಿದೆ. ಅಕ್ಕಿಗೆ ಕಷ್ಟವಾಗಿದ್ದ ಕಾಲ.. ಆಗ ಮನೆಯಲ್ಲಿ ಹೇಳುತ್ತಿದ್ದ ಒಂದು ಮಾತು “ಹೊಟ್ಟೆ ತುಂಬಾ ಹಿಟ್ಟು, ಬಾಯಿ ತುಂಬಾ ಅನ್ನ" . ಅಂದಿನ ದಿನಗಳಲ್ಲಿ, ಯಾವ ಕಾರಣಕ್ಕೂ ಅನ್ನವನ್ನು ಬೀದಿಗೆ ಎಸೆಯುತ್ತಿರಲಿಲ್ಲ.... ಕಲಗಚ್ಚಿನ ಬಾನಿಯಲ್ಲಿ ಹಾಕಿದರೆ ಅದನ್ನು ಹಸು ಎಮ್ಮೆಗಳು ಕುಡಿಯುತ್ತಿದ್ದವು. ಭತ್ತಕುಟ್ಟಿದಾಗ, ಹೊಟ್ಟನ್ನು ಜರಡಿ ಮಾಡಿ ಉಳಿದ ...