ಯೋಗಾ ಯೋಗ - Narrow gauge train ಇಂದ ವಿಮಾನಯಾನದ ವರೆಗೆ
30 Dec 2022 2022ರ ಕೊನೆಯ ವಾರ ಒಂದು ವಿಶಿಷ್ಟ ಅನುಭವ. 33 ಜನರೊಡನೆ... ಅದರಲ್ಲೂ ಅಕ್ಕತಂಗಿಯರು ಅಣ್ಣ ತಮ್ಮಂದಿರು ಮತ್ತು ಅವರ ಮಕ್ಕಳು ಮೊಮ್ಮಕ್ಕಳೊಡನೆ ವಿಮಾನಯಾನ. ಸಂದರ್ಭ ನಮ್ಮಪ್ಪನ ಹಿರಿಯ ಮೊಮ್ಮಗ ರವಿ ಹಾಗೂ ವಿನುತಾ ದಂಪತಿಯ ಮೊದಲ ಮಗಳ ಮದುವೆಯ ನಿಶ್ಚಿತಾರ್ಥ ದೂರದ ಕಲ್ಬುರ್ಗಿಯಲ್ಲಿ. ಮೈಸೂರಿನ ಹುಡುಗಿ... ಕಲ್ಬುರ್ಗಿಯ ಹುಡುಗ.. ಇದೇ ಅಲ್ಲವೇ ಋಣಾನುಬಂಧ. ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತ ಣಿಂದೆತ್ತ ಸಂಬಂಧವಯ್ಯಾ.. ಎಷ್ಟು ಸತ್ಯ ಅಲ್ಲವಾ? ಮೂರು ದಿನದ ನಮ್ಮ ಕಾರ್ಯಕ್ರಮ ವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದವರು ರವಿ ವಿನುತಾ ದಂಪತಿ.... ಅತ್ತ ಕಲ್ಬುರ್ಗಿಯ ಶ್ರೀಮತಿ ಆರತಿ ಹಾಗೂ ಡಾಕ್ಟರ್ ಅರುಣ್ ಕುಮಾರ್ ಕುಲಕರ್ಣಿ ದಂಪತಿಗಳ ಆದರ ಆತಿಥ್ಯವು ಕಲ್ಬುರ್ಗಿಯ ಬಿಸಿಲಿನ ನಡುವೆಯೂ ನಮ್ಮನ್ನು ತಂಪಾಗಿರಿಸಿತ್ತು. ಇಷ್ಟು ದೊಡ್ಡ ನಮ್ಮವರ ಗುಂಪಿನಲ್ಲಿ ಪ್ರಯಾಣ ಮಾಡಿದ ಅನುಭವ ಬಹು ವರ್ಷಗಳ ನಂತರ ಸಿಕ್ಕಿತ್ತು. ಕಾರ್ಯಕ್ರಮ ಮುಗಿದು ನೆನ್ನೆ ಬೆಂಗಳೂರಿಗೆ ಬಂದೆವು... ವಿಮಾನ ನಿಲ್ದಾಣದಿಂದ ನಾನು ಮತ್ತು ನನ್ನಾಕೆ ವಿಜಯ, ನಮ್ಮ ಮನೆಗೆ ಬರುವ ಹಾದಿಯಲ್ಲಿ ಮತ್ತೆ ಸಿಕ್ಕಿದ್ದು ನನ್ನೂರು, ನಾ ಹುಟ್ಟಿದ ಊರು ದೊಡ್ಡ ಜಾಲ. ಈ ಸಲ ಸಮಯ ನನ್ನ ಪರವಾಗಿತ್ತು.. ಜೊತೆಯಲ್ಲಿದ್ದ taxi driver ಸಹ ನನ್ನ ಪರವಾಗಿದ್ದ, ಹಾಗಾಗಿ ನನ್ನೂರಿನಲ್ಲಿ ಸಮಯ ಕಳೆಯುವ ಒಂದು ಅವಕಾಶ ಸಿಕ್ಕಿತ್ತು. ಕೆಲ ಬೀದಿಗಳಲ್ಲಿ ಓಡಾಡಿ ಹಳೆಯ ...