ಒಂದು ಸಾವಿನ ಸುತ್ತ..
ಒಂದು ಸಾವಿನ ಸುತ್ತ.. ಯಾವಾಗಿನಂತೆ ನನ್ನ ಸರದಿ ಯಾದ ಸೋಮವಾರದಂದು ಅಶಕ್ತ ಪೋಷಕ ಸಭಾಗೆ ಹೋದೆ. ಪ್ರವೇಶ ದ್ವಾರದಿಂದಲೇ ವಾತಾವರಣ ಗಂಭೀರವಾಗಿದ್ದು... ಅಲ್ಲೊಂದು ಆಂಬುಲೆನ್ಸ್ ಬಂದು ನಿಂತಿತ್ತು. ಯಾರಿಗೋ ಆರೋಗ್ಯ ತಪ್ಪಿರಬಹುದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಾಹನ ಬಂದಿರಬಹುದು ಅಂದುಕೊಂಡು ಹತ್ತಿರ ಹೋಗಿ ನೋಡಿದಾಗ ಅದು ಶವವನ್ನು ಸಾಗಿಸುವ ವಾಹನವಾಗಿತ್ತು. ವಿಚಾರಿಸಿದಾಗ ಒಬ್ಬ ಹೆಣ್ಣು ಮಗಳು ಸಾವನ್ನಪ್ಪಿದ್ದಾರೆಂದು ತಿಳಿಯಿತು. ಹೆಸರು ನಾಗರತ್ನಮ್ಮ ಒಂದು ಕ್ಷಣ ನನಗೆ ಮುಖದ ನೆನಪು ಬರಲಿಲ್ಲ. ಒಂದೆರಡು ಮಾತುಗಳ ನಂತರ ನನಗೆ ಹೊಳೆಯಿತು ಅದು ಬಿ ಆರ್ ನಾಗರತ್ನಮ್ಮ ಅಂತ. ಸಾಕಷ್ಟು ಬಾರಿ ಮಾತನಾಡಿದ ನೆನಪಾಯಿತು. ಇಚೀಚೆಗೆ ನೋಡಿರಲಿಲ್ಲ. ಇಂಥ ಸಮಯದಲ್ಲಿ ಲೋಕಾಭಿರಾಮವಾಗಿ ಮಾತನಾಡುವುದು ಸರಿ ಅನ್ನಿಸಿ ನಿವಾಸಿಗಳೊಡನೆ ಅವರ ಭಾವನೆಗಳನ್ನು ತಿಳಿಯಲು ಪ್ರಯತ್ನಿಸಿದೆ. ಕೆಲ ಅಭಿಪ್ರಾಯಗಳು ಹೀಗಿತ್ತು: " ತುಂಬಾ ಸಕ್ಕರೆ ಕಾಯಿಲೆ ಇತ್ತು.. ಆದರೆ ಹೇಳಿದ ಮಾತು ಕೇಳುತ್ತಿರಲಿಲ್ಲ... ತಿನ್ನುವುದರ ಮೇಲೆ ಹತೋಟಿ ಇರಲಿಲ್ಲ" " ಓಡಾಡಕ್ಕೆ ಆಗ್ತಿರಲಿಲ್ಲ ತುಂಬಾ ಕಷ್ಟಪಡುತ್ತಿದ್ದರು" " ಹೋಗ್ಲಿ ಬಿಡಿ ತುಂಬಾ ನರಳಲಿಲ್ಲ.. ಗೆದ್ದಳು" " ನೆನೆಸಿಕೊಂಡರೆ ಭಯ ಆಗುತ್ತೆ ನಮಗೇನು ಕಾದಿದಿಯೋ ಅಂತ" " ಒಂದಲ್ಲ ಒಂದು ದಿವಸ ಸಾಯಬೇಕಲ್ವಾ?" "ಎಲ್ಲರೂ ಹೋಗೋದೇ.. ಅವರು ಇವತ್ತು ...