ಕೊನೆಯ ಆಸೆ - Last wish

ಕೊನೆಯ ಆಸೆ - Last wish (will) ನನ್ನ ಬ್ಲಾಗ್ ಲೇಖನ “ನನಸಾಗದ ಕನಸುಗಳು.. ಕೈಗೂಡದ ಆಸೆಗಳು” ಓದಿದ ಶ್ರೀಮಾನ್ ಗುಂಡೂರಾಯರ ಪ್ರತಿಕ್ರಿಯೆ ಕೆಳಗಿನಂತಿತ್ತು: ಕೆಲ ದಿನಗಳ ನಂತರ ಮತ್ತೊಮ್ಮೆ ನಾ ಬರೆದ ಲೇಖನವನ್ನು... ನಾನೇ ಓದಿದೆ.. ಅಮ್ಮನ ಬಗ್ಗೆ ಬರೆದದ್ದನ್ನು ಬಿಟ್ಟರೆ... ಭಾವವನ್ನು ಪ್ರಚೋದಿಸುವ ಯಾವ ಅಂಶವು ಬೇರೆಲ್ಲೂ ನನಗೆ ಕಾಣಲಿಲ್ಲ.. ಅಂದಿನ ಕಾಲಕ್ಕೆ ಕೆಲವು ವಿಚಾರದಲ್ಲಿ ನಿರಾಶೆಯಾಗಿದ್ದರೂ... ಕಾಲಕ್ರಮೇಣ ವಸ್ತು ಸ್ಥಿತಿಯನ್ನು ಒಪ್ಪಿಕೊಂಡದ್ದರಿಂದ ನಿರ್ಲಿಪ್ತ ಭಾವನೆ ಇತ್ತು. ಇನ್ನು ಕೆಲವೊಂದು ತಿಕ್ಕಲುತನಗಳು.. ಯಾವ ಭಾವ ಹೊಮ್ಮಲು ಸಾಧ್ಯ ಇತ್ತು? ಲೇಖನ ಬರೆದ ಆಗಿನ ಭಾವನೆಗಳು ಮಾತ್ರ ಅಲ್ಲಿ ಹೊರ ಹೊಮ್ಮಿದೆ. ಗುಂಡೂರಾಯರ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಗೌರವವಿದೆ.. ಅದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಆಶ್ವಾಸನೆ ಕೊಡಬಲ್ಲೆ. ನಿಮ್ಮ ಅಭಿಪ್ರಾಯಕ್ಕೆ ನನ್ನ ನಮನಗಳು ಸರ್. ಇನ್ನು ಎರಡನೆಯ ಭಾಗಕ್ಕೆ ಬಂದಾಗ.. ಇದೇ ಶೀರ್ಷಿಕೆಯಲ್ಲಿ ಎರಡನೇ ಪ್ರಬಂಧ ಬರೆಯುವ ಸಲಹೆ. ಇದು ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿತು. “once more ಎಂದರೆ ಹಾಡುವುದು ಪಾತ್ರದಾರನ ಮರ್ಜಿ" ಎಂದು ಪ್ರಕಟಿಸಿದ್ದ ನಾಟಕದ ಕರಪತ್ರ... ಶಹಾಬಾದಿನಲ್ಲಿ ಓದಿದ್ದು ನೆನಪಿಗೆ ಬಂದು.. ಆ ಸಾಲನ್ನೇ ಉಪಯೋಗಿಸಿ ಎರಡನೇ ಪ್ರಬಂಧವನ್ನು ಬರೆಯಲು ತಪ್ಪಿಸಿಕೊಳ್ಳೋಣವೇ ಎಂದು ಯೋಚಿಸಿದ್ದು ಉಂಟು. ಹಾಗೆ ಮಾಡಲು ಮನಸ...