ಬಾಲ್ ಗ್ಲ್ಯಾಡರ್ ನಲ್ಲಿ ಕಲ್ಲು

"ವಿಧಿ ಬರೆದ ಬರಹವ ತಪ್ಪಿಸಲು ಹರಿಹರ ವಿರಿಂಚಾದ್ಯರಿಗೆ ಸಾಧ್ಯವೇ.. ನಮ್ಮ ಪಾಡೇನು" ಇದು ಮಾಧ್ಯಮಿಕ ಶಾಲೆಯಲ್ಲಿ ನಾನು ಓದಿದ ನಳ ಚರಿತ್ರೆಯ ಒಂದೆರಡು ಸಾಲು.... ಹಣೆ ಬರಹಕ್ಕೆ ಹೊಣೆಯಾರು ? ಅನ್ನುವುದು ಒಂದು ಮಾತು.... ಈ ಮಾತುಗಳು ನಾವು ಉಪಯೋಗಿಸುವುದು ನಮ್ಮೆಲ್ಲ ಪ್ರಯತ್ನಗಳು ಮುಗಿದು ನಮಗೆ ಬೇಕಾದ ಗುರಿಯನ್ನು ಮುಟ್ಟಲು ಸಾಧ್ಯವಾಗದಿದ್ದಾಗ ಹೇಳುವ ಮಾತು. ಅದು ಸಾಂತ್ವನ ಮಾಡುವ / ಮಾಡಿಕೊಳ್ಳುವ ವಿಧಾನದ ಕೊನೆಯ ಮಜಲು ಅಂತ ನನ್ನ ಅನಿಸಿಕೆ..ಹಾಗೂ ಆಪ್ತಸಮಾಲೋಚಕನಾಗಿ ನನ್ನ ಅನುಭವ. ಹಣಕಾಸಿನ ಕಷ್ಟ, ದೈಹಿಕ ಕಷ್ಟ ಇದಕ್ಕೆ ಪರಿಹಾರ ಹುಡುಕುವುದು ಅಷ್ಟು ಕಷ್ಟವಲ್ಲ... ಆದರೆ ಮಾನಸಿಕ ಕಷ್ಟಕ್ಕೆ ಪರಿಹಾರ ಅಷ್ಟು ಸುಲಭವಲ್ಲ... ಇಂಥ ಸಮಯದಲ್ಲಿ ಎಲ್ಲಾ ವೈರುಧ್ಯಗಳೊಡನೆ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ.. ಒಂದು ದಶಕದ ಹಿಂದಿನ ಮಾತು... ನನಗೂ ಹೀಗೆ ಅನಿಸಿತ್ತು.... ಒಂದು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದು.. ನೆರೆದಿದ್ದ ಒಂದಷ್ಟು ಜನರ ಜೊತೆ ಹರಟೆ ಹೊಡೆದು ಕೊಟ್ಟ ಸಿಹಿಯನ್ನು ತಿಂದು... ಎಲ್ಲರನ್ನೂ ಕಳಿಸಿಯಾದ ಮೇಲೆ... ಸ್ವಲ್ಪ ಹೊತ್ತಿನಲ್ಲೇ ಏನೋ ಕಿರಿಕಿರಿ, ಹೊಟ್ಟೆಯ ಮೇಲಿನ ಹಾಗೂ ಎದೆ ಕೆಳಗಿನ ಜಾಗದಲ್ಲಿ ಸ್ವಲ್ಪ ನೋವು... ಬರುಬರುತ್ತ ಆ ನೋವು ಜಾಸ್ತಿ ಆಯ್ತು, ಸಾಮಾನ್ಯವಾಗಿ ಇಂಥ ನೋವುಗಳಿಗೆ ನಾನು ಅಷ್ಟು ಪ್ರಾಮುಖ್ಯತೆ ಕೊಡುವುದಿಲ್ಲ.. ಆದರೆ ಆಗಿನ ನೋವು ತಾರಕ ಮುಟ್ಟುತ್ತಿತ್ತು... ತಡೆ...