ಬದಲಾವಣೆ ಜಗದ ನಿಯಮ
ಬದಲಾವಣೆ ಜಗದ ನಿಯಮ ನಾವು ಒಂಭತ್ತು ಜನರ ಒಂದು ತಂಡ "ಅಶಕ್ತ ಪೋಷಕ ಸಭಾ" ಎಂಬ ವೃದ್ಧಾಶ್ರಮದಲ್ಲಿ ಅಲ್ಲಿರುವ ನಿವಾಸಿಗಳೊಡನೆ ಒಂದಷ್ಟು ಒಡನಾಟವನ್ನು ಇಟ್ಟುಕೊಂಡಿದ್ದೇವೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸುಮಾರು 100 ನಿಮಿಷಗಳ ಕಾಲ ಅವರೊಂದಿಗಿರುತ್ತೇವೆ- ವಿವಿಧ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುತ್ತಾ. ನಮ್ಮ ಮೂಲ ಉದ್ದೇಶ ಅಲ್ಲಿರುವ ಜನಗಳ ಏಕತಾನತೆಯನ್ನು ಕಳೆದು ಅವರು ಒಂದಷ್ಟು ಚಟುವಟಿಕೆಯಲ್ಲಿ ತೊಡಗಿಸುವುದು. ಸತತ ಪ್ರಯತ್ನದಿಂದ ಒಂದಷ್ಟು ಬದಲಾವಣೆ ಬಂದಿದೆ. ಸುಮಾರು ಜನ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಕೆಲವರು ಹಿಂದಿದ್ದಾರೆ. ಅವರಿಗೂ ಪ್ರೇರೇಪಿಸುವುದು ನಮ್ಮ ಗುರಿ. (ಕರೋನ ಕಾರಣದಿಂದ ಈಗ ಸಧ್ಯ ನಿಂತಿದೆ) ಸಾಮಾನ್ಯವಾಗಿ ದಿನದ ಕಾರ್ಯಕ್ರಮ ಶುರುವಾಗುವುದು ಪ್ರಾರ್ಥನೆಯೊಂದಿಗೆ- ಅದೂ ನಿವಾಸಿಗಳಿಂದ. ಎಲ್ಲರೂ ಹಾಡಬೇಕೆಂದು ನಾವುಗಳು ಆಗ್ರಹ ಪೂರ್ವಕವಾಗಿ ಹೇಳುತ್ತಿರುತ್ತೇವೆ. ಅದೊಂದು ದಿನ (12.01.2020) ಒಂದು ಖುಷಿ ಕೊಡುವ ಸಂಗತಿ ನಡೆಯಿತು. ಅಂದಿನ ವಿಶೇಷ - ಪ್ರಾರ್ಥನೆ ಮಾಡಿದ್ದು ನಾಗರತ್ನ (ನಾಗು). ನಾಗು ಬಗ್ಗೆ ಎರಡು ಮಾತು. ಸುಮಾರು ಎಪ್ಪತ್ತರ ವಯಸ್ಸು. ಯಾವಾಗಲೂ ನಗುಮುಖ. ಮಾತು ತುಂಬಾ ಕಡಿಮೆ, ಆಡಿದ್ದೂ ಸ್ಪಷ್ಟವಿಲ್ಲ. ಹಾಗಾಗಿ ಮಾತೇ ಕೇಳಿಲ್ಲ. ಸ್ವಾಗತ ಮತ್ತು ಬೀಳ್ಕೊಡುಗೆ ಸಹ ಮುಗಿದ ಕೈ ಮತ್ತು ನಗುವಿನೊಂದಿಗೆ. ಈ ನಾಗು ಮಾಡಿದ ಪ್ರಾರ್ಥನೆ ನಾ ಕಂಡ ಒಂದು ದೊ...