ಸುಂಕೇನಹಳ್ಳಿ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ:

ಸುಂ ಕೇನಹಳ್ಳಿ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ: ಕೆಲಕ್ಷಣಗಳು ನನ್ನ ಮನಸ್ಸು ಗತಕಾಲದಲ್ಲಿ ಸಿಲುಕಿತ್ತು. ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ಭಾಗವಹಿಸಿದ ನೆನಪುಗಳು. ರೋಮಾಂಚಕ, ಮಧುರ ನೆನಪುಗಳು. ಇದಕ್ಕೆ ಕಾರಣ, ಇಂದು (23.12.2019) ನಾನು ಭಾಗವಹಿಸಿದ ಸುಂಕೇನಹಳ್ಳಿ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ. ಕಾರ್ಯಕ್ರಮವನ್ನು ಶಾಲೆಯ ಪಕ್ಕದಲ್ಲಿರುವ ಕೆ.ಹೆಚ್. ಕಲಾಸೌಧದಲ್ಲಿ ಏರ್ಪಡಿಸಿದ್ದರು ( ಕೆ.ಹೆಚ್. ಕಲಾಸೌಧದ ಬಗ್ಗೆ ನನ್ನ ಲೇಖನದ ಲಿಂಕ್.....https://www.blogger.com/blogger.g?blogID=169266169028192815#editor/target=post;postID=503227361699777314;onPublishedMenu=allposts;onClosedMenu=allposts;postNum=8;src=postname. ಅಲ್ಲಿದ್ದ ಸುಂದರ ವಾತಾವರಣ, ಮಕ್ಕಳ ವೇಷಭೂಷಣ, ಒಂದು ನಿಯೋಜಿತ ಗುಂಪು ಎಲ್ಲರನ್ನು ಸ್ವಾಗತಿಸುತ್ತಿದ್ದ ಪರಿ, ಉತ್ಸಾಹ ಎಲ್ಲ ನೋಡಿದಾಗ, ಇದು ಯಾವ ತರಹದ ಖಾಸಗಿ ಶಾಲೆಗೂ ಕಡಿಮೆಯೆನಿಸಲಿಲ್ಲ. ಇನ್ನು ಕಾರ್ಯಕ್ರಮ ಶುರು - ಚಂದನ್ ಮತ್ತು ಮೋನಿಕಾ - ನಿರೂಪಕರಾಗಿ ನಿರ್ವಹಿಸಿದ ರೀತಿ,ಅಧ್ಭುತವಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೋಕಸಭಾ ಸದಸ್ಯ ಶ್ರೀ.ತೇಜಸ್ವಿ ಸೂರ್ಯ ಅವರು, ಸ್ವಯಂಪ್ರೇರಿತರಾಗಿ ಮೆಚ್ಚುಗೆ ಸೂಚಿಸಿ ಬಹುಮಾನವಿತ್ತರು. ಇವರು ಈ ಶಾಲೆಯಲ್ಲಿ ಓದಿದ ಮಕ್ಕಳು. ಇದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಲ್ಲಿರು...