ಜೀವನ- ಉತ್ಸಾಹ- ಉತ್ಸವ

ಜೀವನ- ಉತ್ಸಾಹ- ಉತ್ಸವ ಹೋದ ಲೇಖನದಲ್ಲಿ ಹೇಳಿದಂತೆ... ಜೀವನದ ವಿಷಯಗಳ ಬಗ್ಗೆ ಬರೆಯಲು ಯೋಚಿಸುತ್ತಿದ್ದಾಗ ಕಣ್ಣಿಗೆ ಬಿದ್ದದ್ದೆ, ನನ್ನ ಯುವ ಸ್ನೇಹಿತ ಮಣಿಕಂಠ facebook ನಲ್ಲಿ ಬರೆದಿದ್ದ ಒಂದು ಲೇಖನ. ಮಣಿಕಂಠನಿಗೆ ಮದುವೆಯಾಗಿ ಒಂದು ವರ್ಷ ಆದ ಸಂದರ್ಭದಲ್ಲಿ ತನ್ನ ಮಡದಿಗೆ ಬರೆದ ಪತ್ರರೂಪದ ಲೇಖನ. ಅದು ತನ್ನ ಮಡದಿಗೆ ಬರೆದದ್ದಾದರೂ.. ಪತ್ರವು ಬಹಿರಂಗ ರೂಪದಲ್ಲಿ ಇತ್ತು. ಪತ್ರವೂ ಭಾವುಕತೆಯಿಂದ ಕೂಡಿತ್ತು... ಅಲ್ಲಿ ಮದುವೆಯ ಮುಂಚಿನ ಮತ್ತು ನಂತರದ ಸುಂದರ ಕ್ಷಣಗಳು, ಮದುವೆಯ ಸಂಭ್ರಮ, ಕಾರ್ಯನಿಮಿತ್ತ ದೂರವಿರಬೇಕಾದಂತ ಸಮಯದ ಅಗಲಿಕೆ (ವಿರಹ ಎನ್ನಲೇ) ಇದರ ಮಧ್ಯೆ ಮುದ್ದು ಕಂದನ ಆಗಮನದ ಮುನ್ಸೂಚನೆಯ ಸಿಹಿ ಸುದ್ದಿ.... ಅದರ ಜೊತೆ ಜೊತೆಗೆ ಮಗುವನ್ನು ಪಡೆಯಲು ತಾಯಿ ಪಡಬೇಕಾದಂತಹ ನೋವು, ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಇರುವ ಸ್ಥಾನಮಾನ ಹೀಗೆ ಸಾಕಷ್ಟು ವಿಷಯಗಳ ಚಿಂತನ ಮಂಥನ. ಜೀವನವನ್ನು ಉತ್ಸಾಹದಿಂದ ನೋಡಿದ, ಸಂಭ್ರಮದಿಂದ ಅನುಭವಿಸಿದ ಮನದಾಳದ ಮಾತುಗಳು. ಅದರಲ್ಲೂ ಮಗನ ಆಗಮನ ಸಂಭ್ರಮವನ್ನು ಇಮ್ಮಡಿಸಿತ್ತು ಎಂದು ನನ್ನ ಅನಿಸಿಕೆ. ಓದಿದ ನಂತರ... ಜೀವನವನ್ನು ಉತ್ಸಾಹದಿಂದ..ಉತ್ಸವದಂತೆ ಆಚರಿಸುವ, ಸಂಭ್ರಮಿಸುವ ಕ್ಷಣಗಳನ್ನು, ಅಂತಹ ಸ್ಫೂರ್ತಿದಾಯಕ ವ್ಯಕ್ತಿಗಳನ್ನು ನೆನಪಿನಿಂದ ಹೆಕ್ಕಿ ತೆಗೆಯುವ ಮನಸಾಯಿತು... ಇದೋ ನಿಮ್ಮ ಮುಂದೆ ಆ ಮಧುರ ನೆನಪುಗಳು. ಉತ್ಸವ ಎಂದ ಕ್ಷಣ ನನ್ನ ನೆನಪಿಗ...