ನಾವು ಸ್ವಾರ್ಥಿ ಆಗಬೇಕೇ?

ಸರ್ವೇ ಜನಾಃ ಸುಖಿನೋ ಭವಂತು//ಲೋಕಾ ಸಮಸ್ತಾಃ ಸುಖಿನೋಭವಂತು// ಎನ್ನುವ ಮೂಲಭೂತ ಚಿಂತನೆ ಇರುವ ಧರ್ಮದ ಭಾಗವಾದ ನಮಗೆ... ಸ್ವಾರ್ಥಿ ಆಗಬೇಕೇ ಎನ್ನುವ ಪ್ರಶ್ನೆ ಅಸಮಂಜಸ ಎನಿಸಿತೇ? ಮೊದಲಿಗೆ ಸ್ವಾರ್ಥ ಪದದ ಅರ್ಥ... ತಾನು, ತನ್ನದು ..ತನ್ನ ಬಗ್ಗೆ ಯೋಚಿಸುವುದು.... ಈ ಭಾವ ಇಲ್ಲದಿದ್ದರೆ... ಮನುಷ್ಯನ ಜೀವನಕ್ಕೆ ಗುರಿಯೇ ಇಲ್ಲದಂತಾಗುತ್ತದೆ... ಅಸ್ತಿತ್ವದ ಪ್ರಶ್ನೆ ಎಂದು ನನ್ನ ಅನಿಸಿಕೆ... ನಾನು ಸಂತೋಷದಿಂದಿದ್ದರೆ... ಅದನ್ನು ಬೇರೆಯವರಿಗೆ ಹಂಚಲು ಸಾಧ್ಯ... ಇದರ ಇನ್ನೊಂದು ಮುಖ ನಿಸ್ವಾರ್ಥ....ತನ್ನದಲ್ಲದ... ಪರರ ಚಿಂತನೆ. ಈ ಶ್ಲೋಕವನ್ನು ಗಮನಿಸಿ.. ಪರೋಪಕಾರಾಯ ಫಲಂತಿ ವೃಕ್ಷಃ ಪರೋಪಕಾರಾಯ ವಹಂತಿ ನದ್ಯಃ ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮಿದಂ ಶರೀರಂ// ಇದರ ಚಿಂತನೆ ಏನೋ ಸರಿ ಇದೆ... ಆದರೆ ಈಗಿನ ಕಾಲಮಾನದ ಮನುಷ್ಯನ ಜೀವನಶೈಲಿಗೆ ಹೊಂದಿಕೆಯಾಗುವುದಿಲ್ಲ.... ಎಲ್ಲವನ್ನೂ ಹಣದಿಂದಲೇ ಅಳೆಯುವ ಇಂದಿನ ಕಾಲಘಟ್ಟದಲ್ಲಿ ಹಣ್ಣು ಕೊಡುವ ಮರ / ನೆರಳು ಕೊಡುವ ಮರ ಯಾವುದೇ ಆಗಲಿ.. ತನ್ನ ಅಭಿವೃದ್ಧಿಗಾಗಿ ನಾಶ ಮಾಡುತ್ತಾನೆ. ಹರಿಯುವ ನದಿಯ ನೀರನ್ನು.. ಕೊಳಕು ಮಾಡುತ್ತಾನೆ... ಹಾಲು ಕೊಡುವ ಹಸುವನ್ನು ಎಷ್ಟರಮಟ್ಟಿಗೆ ಶೋಷಣೆ ಮಾಡುತ್ತಾನೆಂದರೆ... ಅದರ ಕರುವಿಗೂ ಹಾಲು ಸಿ...